ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ನಿಧನ

ಮಂಗಳೂರು (ಮುಂಬೈ): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು (ಅ.23) ನಿಧನರಾಗಿದ್ದಾರೆ. 77 ವರ್ಷದ ಬೇಡಿ ಪತ್ನಿ ಅಂಜು, ಪುತ್ರ ಅಂಗದ್ ಮತ್ತು ಪುತ್ರಿ ನೇಹಾ ಅವರನ್ನು ಅಗಲಿದ್ದಾರೆ.

ಸ್ಪಿನ್ನರ್ ಆಗಿದ್ದ ಬೇಡಿ 1967 ಮತ್ತು 1979 ರ ನಡುವೆ ಭಾರತಕ್ಕಾಗಿ 67 ಟೆಸ್ಟ್ ಪಂದ್ಯಗಳನ್ನು ಆಡಿ, 266 ವಿಕೆಟ್ ಗಳನ್ನು ಪಡೆದಿದ್ದಾರೆ. 10 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಇ.ಎ.ಎಸ್.ಪ್ರಸನ್ನ, ಬಿಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಬೇಡಿ, ಭಾರತದ ಸ್ಪಿನ್ ಬೌಲಿಂಗ್ ಇತಿಹಾಸದಲ್ಲಿ ಕ್ರಾಂತಿ ಮಾಡಿದ ಕ್ರಿಕೆಟಿಗನಾಗಿದ್ದರು. ಬೇಡಿ ಅವರು 1990 ರಲ್ಲಿ ಭಾರತೀಯ ರಾಷ್ಟ್ರೀಯ ತಂಡದ ಮೊದಲ ವೃತ್ತಿಪರ ಮುಖ್ಯ ತರಬೇತುದಾರರಾಗಿದ್ದರು. ನಂತರ, ಬೇಡಿ ಕೆಲವು ರಾಜ್ಯ ತಂಡಗಳಿಗೆ ತರಬೇತಿ ನೀಡುತ್ತಿದ್ದು, 1992-93 ಋತುವಿನಲ್ಲಿ ಪಂಜಾಬ್ ರಣಜಿ ಟ್ರೋಫಿ ಗೆಲುವಲ್ಲಿ ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here