



ಮಂಗಳೂರು(ದಮ್ಮಾಮ್): ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ಅಧೀನದಲ್ಲಿರುವ ದಮ್ಮಾಮ್ ಝೋನಲ್ ಶಾಖೆಯ ವತಿಯಿಂದ ಅ.26ರಂದು ದಮ್ಮಾಮ್ ನಲ್ಲಿ ಬೃಹತ್ ಫ್ಯಾಮಿಲಿ ಮುಲಾಖಾತ್ ಆಯೋಜಿಸಲಾಗಿದೆ.







ಡಿಕೆಯಸ್ಸಿಯ ವಿಷನ್ 30 ಗೆ ಈ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗುವುದು ಎಂದು ಫ್ಯಾಮಿಲಿ ಮುಲಾಖಾತ್ ಆಯೋಜಕರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್, ದ.ಕ. ಜಿಲ್ಲಾ ವಖ್ಫ್ ಬೋರ್ಡ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಮರ್ಕಝುಲ್ ಇಹ್ಸಾನ್ ಮೂಳೂರು ಇದರ ಪ್ರಾಂಶುಪಾಲ ಹಬೀಬುರ್ರಹ್ಮಾನ್, ಪತ್ರಕರ್ತ ಬಿ.ಎಂ. ಹನೀಫ್, ಅಲ್ ಮುಝೈನ್ ಸಂಸ್ಥೆಯ ಝಕರಿಯ್ಯಾ, ಎಕ್ಸಪರ್ಟೈಸ್ ಸಂಸ್ಥೆಯ ಶೇಖ್ ಇಬ್ರಾಹೀಂ ರಕ್ವಾನೀ, ನಝೀರ್ ಅಲ್ ಫಲಾಹ್, ಶಾಕಿರ್ ಹೈಸಂ, ಇನ್ನಿತರ ಉಲಮಾ- ಉಮರಾ ನಾಯಕರು, ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಸ್ಫರ್ಧೆ, ದಫ್ಫ್, ಕ್ವಿಝ್, ಖಿರಾಅತ್, ನಅತ್ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದು, ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.












