ವಿಮಾನ ಪ್ರಯಾಣಿಕರ ಗಮನಕ್ಕೆ- ಚೆಕ್-ಇನ್ ಬ್ಯಾಗೇಜ್‌ನಲ್ಲಿ ನಿಷೇಧಿತ ವಸ್ತುಗಳ ಪಟ್ಟಿ ಬಿಡುಗಡೆ ಮಾಡಿದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ

ಮಂಗಳೂರು(ಅಬುಧಾಬಿ): ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗದ ಉದ್ದೇಶಗಳಿಗಾಗಿ ಅನೇಕ ಭಾರತೀಯರು ಯುಎಇಗೆ ಪ್ರಯಾಣಿಸುತ್ತಿದ್ದು, ಭಾರತ-ಯುಎಇ ಕಾರಿಡಾರ್ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾಗಿದೆ. ಭಾರತದಿಂದ ಯುಎಇಗೆ ಪ್ರಯಾಣಿಸುವ ಅನೇಕ ಜನರು ತಮ್ಮ ಬ್ಯಾಗ್‌ಗಳಲ್ಲಿ ಯುಎಇಯಲ್ಲಿ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿರುವುದರಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ಯುಎಇ ಗೆ ವಿಮಾನದಲ್ಲಿ ಕೊಂಡೊಯ್ಯಬಾರದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಒಣ ತೆಂಗಿನಕಾಯಿ, ಪಟಾಕಿಗಳು, ಬೆಂಕಿಕಡ್ಡಿಗಳು, ಪೈಂಟ್, ಕರ್ಪೂರ, ತುಪ್ಪ, ಉಪ್ಪಿನಕಾಯಿ ಮತ್ತು ಇತರ ಎಣ್ಣೆಯುಕ್ತ ಆಹಾರ ಪದಾರ್ಥಗಳನ್ನು ಚೆಕ್‌ ಇನ್‌ ಬ್ಯಾಗೇಜ್‌ ಗಳಲ್ಲಿ ನಿಷೇಧಿಸಲಾಗಿದೆ. ಇ-ಸಿಗರೇಟ್‌ಗಳು, ಲೈಟರ್‌ಗಳು, ಪವರ್ ಬ್ಯಾಂಕ್‌ಗಳು ಮತ್ತು ಆಲ್ಕೋಹಾಲ್ ಬಾಟಲಿಗಳು ಸ್ಫೋಟದ ಸಾಮರ್ಥ್ಯ ಮತ್ತು ಅಪಾಯಗಳ ತೀವ್ರತೆಯನ್ನು ಹೆಚ್ಚಿಸಲಿದ್ದು ಇವುಗಳನ್ನು ನಿಷೇಧಿಸಲಾಗಿದೆ. ಒಣ ತೆಂಗಿನಕಾಯಿಯಲ್ಲಿ ಹೆಚ್ಚಿನ ಎಣ್ಣೆ ಅಂಶದಿಂದಾಗಿ ಬೆಂಕಿ ಉಲ್ಬಣಗೊಳ್ಳುತ್ತದೆ. ಭಾರತದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ ಇದನ್ನು ಮಾರ್ಚ್ 2022 ರಲ್ಲಿ ನಿಷೇಧಿತ ವಸ್ತುಗಳ ಪಟ್ಟಿಗೆ ಸೇರಿಸಿದೆ.

LEAVE A REPLY

Please enter your comment!
Please enter your name here