ಸುಳ್ಯದ ಪರಿವಾರಕಾನ ಬಳಿ ಕುಸಿದ ಭೂಮಿ-ಉರುಳಿದ ವಿದ್ಯತ್‌ ಕಂಬ-ಅವೈಜ್ಞಾನಿಕ ಕಾಮಗಾರಿ ಶಂಕೆ-ಆತಂಕಗೊಂಡ ಸ್ಥಳೀಯ ಜನತೆ

ಮಂಗಳೂರು(ಸುಳ್ಯ): ಸುಳ್ಯದ ಪರಿವಾರಕಾನದ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಭೂ ಕುಸಿತವಾಗಿದ್ದು ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದೆ. ಏಕಾಏಕಿ ಭೂಮಿ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

ಸುಳ್ಯದಲ್ಲಿ ಭಾರಿ ಮಳೆ‌ ಸುರಿದಿದ್ದು, ಈ ಹಿನ್ನಲೆಯಲ್ಲಿ ಭೂಕುಸಿತ ಆಗಿದೆ ಎನ್ನುವುದು ಕೆಲವರ ಹೇಳಿಕೆ. ಆದರೆ ಇಂಟರ್ ಲಾಕ್ ಅಳವಡಿಸಿರುವ ಭೂಮಿಯಡಿ ನೀರು ರಭಸವಾಗಿ ನುಗ್ಗದಿದ್ದರೂ ಭೂಕುಸಿತ ಹೇಗೆ ಸಂಭವಿಸಿತು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಗುಂಡಿ ಪಕ್ಕದಲ್ಲಿ ಇರುವ ವಿದ್ಯುತ್ ಕಂಬವೂ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಪ್ರತಿ ದಿನ ಹೋಟೆಲ್ ಗೆ ಬರುವ ಗಿರಾಕಿಗಳ ಕಾರುಗಳನ್ನು ಅಲ್ಲಿ ಪಾರ್ಕಿಂಗ್ ಮಾಡಲಾಗುತ್ತಿತ್ತು. ಆದರೆ ಘಟನೆ ಸಂಭವಿಸಿದ ವೇಳೆ ಯಾರೂ ಇಲ್ಲದೆ ಇದ್ದುದರಿಂದ ಸಂಭವಿಸಬಹುದಾಗಿದ್ದ ದುರಂತ ತಪ್ಪಿದೆ. ‘ಸುಡಾ’ ನಿಯಮದಂತೆ ಕಟ್ಟಡ ನಿರ್ಮಾಣವಾಗಿದ್ದರೂ ಕಟ್ಟಡದ ಬಳಿ ಕುಸಿತವಾಗಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here