ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ

ಮಂಗಳೂರು(ಕಾಸರಗೋಡು): ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ಸಮೀಪದ ಪದ್ಯಾಣದಲ್ಲಿ ನಡೆದಿದೆ. ಪದ್ಯಾಣದ ಸಿಲ್ವೆಸ್ಟರ್ ಕ್ರಾಸ್ತಾ ಎಂಬವರ ಪುತ್ರ ಐವನ್ ಕ್ರಾಸ್ತಾ(23) ಮೃತಪಟ್ಟ ವಿದ್ಯಾರ್ಥಿ.

ತೊಕ್ಕೊಟ್ಟುವಿನ ಕಾಲೇಜೊಂದರ ಬಿಎಡ್ ವಿದ್ಯಾರ್ಥಿಯಾಗಿದ್ದ ಐವನ್ ನ.7ರಂದು ಮನೆಯಿಂದ ನಾಪತ್ತೆಯಾಗಿದ್ದ. ಮನೆಯವರು ಹುಡುಕಾಟ ನಡೆಸಿದ್ದು ರಾತ್ರಿ ವೇಳೆ ಮನೆ ಸಮೀಪದ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ನಡುವೆ ಐವನ್ ಮಲಗುವ ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿಟ್ಟಿದ್ದರೆನ್ನಲಾಗಿದೆ. ಬದಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here