ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕಾರ ಮಾಡಲ್ಲ- ಹಾಸನ ಬಿಇಒ ಕಚೇರಿಯ ಅಧೀಕ್ಷಕರ ಟೇಬಲ್‌ ಮೇಲಿನ ಬರಹ ಸಖತ್ ವೈರಲ್-ಮೆಚ್ಚುಗೆಯ ಮಹಾಪೂರ

ಮಂಗಳೂರು(ಹಾಸನ): ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕಾರ ಮಾಡಲ್ಲ ಎಂದು ಹಾಸನ ಬಿಇಒ ಕಚೇರಿ ಅಧೀಕ್ಷಕರು ತಮ್ಮ ಮೇಜಿನ ಮೇಲೆ ಹಾಕಿರುವ ಫಲಕದ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹಾಸನ ನಗರದ ಬಿಇಒ ಕಚೇರಿಯ ಅಧೀಕ್ಷಕ ಡಿ.ಎಸ್.ಲೋಕೆಶ್‌ ಅವರು ಈ ನಾಮಫಲಕವನ್ನು ಹಾಕಿಕೊಂಡಿರುವ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಲೋಕೆಶ್‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿ ಆಪ್ತ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದರು. ಬಳಿಕ ಹಾಸನ ಕ್ಷೇತ್ರದ ಶಾಸಕರಾಗಿದ್ದ ಪ್ರೀತಂ ಗೌಡರ ಆಪ್ತ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಬಿಇಒ ಕಚೇರಿಯ ಅಧೀಕ್ಷಕರಾಗಿ ಲೋಕೇಶ್‌ ಅವರು ಬಡ್ತಿ ಹೊಂದಿದ್ದು, ಹಾಸನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲೋಕೆಶ್‌ ಅವರು ತಮ್ಮ ಟೇಬಲ್ ಮೇಲೆ ಹಾಕಿಕೊಂಡಿರುವ ಫೋಟೊ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಾಡಿನಾದ್ಯಂತ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುತ್ತೂರು ಸುದ್ದಿ ಪತ್ರಿಕೆಯು “ಲಂಚ ಭ್ರಷ್ಟಾಚರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ” ಅಭಿಯಾನವನ್ನು ನಡೆಸುತ್ತಿದ್ದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು ಪಿ ಶಿವಾನಂದ್‌, ಹಾಸನ ಬಿಇಒ ಕಚೇರಿಯ ಅಧೀಕ್ಷಕ ಡಿ.ಎಸ್.ಲೋಕೆಶ್‌ ಅವರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

 

LEAVE A REPLY

Please enter your comment!
Please enter your name here