ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಕೆ ಮಾಡಿ ಮರುಜೀವ ನೀಡಿದ ಉರಗ ತಜ್ಞ ಖಾಲಿದ್‌ ಚಾವುಸ್‌-ಅಪರೂಪದ ಘಟನೆಗೆ ಸಾಕ್ಷಿಯಾದ ಹಟ್ಟಿ ಜನತೆ

ಮಂಗಳೂರು(ರಾಯಚೂರು): ಎಚ್ಚರ ತಪ್ಪಿದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಕೆ ಮಾಡುವ ಮೂಲಕ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅಪರೂಪದ ಘಟನೆ ರಾಯಚೂರು ಲಿಂಗಸುಗೂರಿನ ಹಟ್ಟಿಯಲ್ಲಿ ನಡೆದಿದೆ.

ಹಟ್ಟಿ ಪಟ್ಟಣದ ಇನ್ನೋವಾ ಕಾರೊಂದರಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಕಂಡು ಗಾಬರಿಗೊಳಗಾದ ಕಾರಿನ ಚಾಲಕ ಹಾವು ಕಾರಿನಿಂದ ಹೊರಗೆ ಬರುವಂತೆ ಮಾಡಲು ಫಿನೈಲ್‌ ಸಿಂಪಡಿಸಿದ್ದಾನೆ. ಫಿನೈಲ್‌ ವಾಸನೆಗೆ ಹಾವು ಹೊರಬರಲಾಗದೆ ಅಲ್ಲಿಯೇ ಎಚ್ಚರ ತಪ್ಪಿತ್ತು. ಸ್ಥಳಕ್ಕೆ ಬಂದ ಉರಗ ತಜ್ಞ ಖಾಲಿದ್‌ ಚಾವುಸ್‌ ಪೈಪ್‌ ಮೂಲಕ ಊದಿ ಕೃತಕ ಉಸಿರಾಟ ನೀಡಿ ಹಾವನ್ನು ಎಚ್ಚರಗೊಳಿಸಲು ಸಾಧ್ಯವಾಗದೇ ಇದ್ದಾಗ ಆಸ್ಪತ್ರೆಗೆ ಹಾವನ್ನು ಒಯ್ದು ಕೃತಕ ಆಮ್ಲಜನಕ ಪೂರೈಕೆ ಮಾಡಲಾಯಿತು. ಇದರಿಂದ ಮರುಜೀವ ಪಡೆದು ಚೇತರಿಸಿಕೊಂಡ ನಾಗರಹಾವನ್ನು ಬಳಿಕ ಕಾಡಿಗೆ ಬಿಡಲಾಯಿತು. ಕೃತಕ ಆಮ್ಲಜನಕದ ಮೂಲಕ ಹಾವಿಗೆ ಮರುಜೀವ ನೀಡಿದ ಘಟನೆಗೆ ಹಲವರು ಸಾಕ್ಷಿಯಾದರು.

LEAVE A REPLY

Please enter your comment!
Please enter your name here