ಮಂಗಳೂರು: ನ.18 ರಂದು ಹೋಟೆಲ್ ಎಜೆ ಗ್ರ್ಯಾಂಡ್ನಲ್ಲಿ ನಡೆದ ವೈಭವದ ಪದಗ್ರಹಣ ಸಮಾರಂಭದಲ್ಲಿ 2024ನೇ ಸಾಲಿನ ಜೇಸಿಐ ಮಂಗಳೂರು ಸಾಮ್ರಾಟ್ನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಜೇಸಿ ದೀಪಾ ರಾವ್ ಅಧಿಕಾರ ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಹನ್ ಕಾರ್ಪೊರೇಶನ್ನ ಚೆಯರ್ಮೆನ್ ರೋಹನ್ ಮೊಂತೇರೊ ‘ಸಂತೃಪ್ತಿ’ ಮತ್ತು ‘ಎಲಿವೇಟ್ 360 ಮಾರ್ಕೆಟಿಂಗ್’ ಎಂಬ ಎರಡು ಹೊಸ ಸ್ಟಾರ್ಟ್ಅಪ್ ಕಂಪನಿಗಳ ಲಾಂಛನ ಬಿಡುಗಡೆಗೊಳಿಸಿದರು. ಈ ಉದ್ಯಮಗಳು, ಜೇಸಿ ಸದಸ್ಯರ ನೇತೃತ್ವದಲ್ಲಿ, ಉದ್ಯಮಶೀಲತೆಯ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದ್ದು, 50 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ ನೀಡಲು ರೋಹನ್ ಕಾರ್ಪೊರೇಷನ್ ಮತ್ತು ಜೇಸಿಐ ಮಂಗಳೂರು ಸಾಮ್ರಾಟ್ ಸಹಯೋಗವನ್ನು ಮೊಂತೇರೊ ಈ ಸಂದರ್ಭದಲ್ಲಿ ಘೋಷಿಸಿದರು.
ಬಳಿಕ ಮಾತನಾಡಿದ ಅವರು, ಯುವಕರಿಗೆ ಜೀವನದ ಸವಾಲುಗಳನ್ನು ಎದುರಿಸಲು, ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯನ್ನು ಬೆಳೆಸುವಲ್ಲಿ ಜೇಸಿಐನಂತಹ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಹೇಳಿದ ಅವರು, ಪ್ರತಿಭೆಗಳು ಹೇರಳವಾಗಿವೆ, ಆದರೆ ನಾಯಕತ್ವ ಕೌಶಲ್ಯಗಳ ಕೊರತೆಯಿದೆ, ಜೇಸಿಐ ಈ ಅಂತರವನ್ನು ಕಡಿಮೆ ಮಾಡುತ್ತಿದೆ ಎಂದು ಹೇಳಿದರು.
ಗೌರವ ಅತಿಥಿಗಳಾದ ಕುಬೇರಪ್ಪ ಜಿಗಳಿ, ಸೋಲಾರಾ ಆಕ್ಟಿವ್ ಫಾರ್ಮಾ ಇದರ ಹೆಚ್ ಆರ್ ಎ ಸಹಾಯಕ ಜನರಲ್ ಮ್ಯಾನೇಜರ್ ಜೆಎಫ್ಎಂ ದೀಪಕ್ ರಾಜ್, ಜೇಸಿಐ ಮಂಗಳೂರು ಸಾಮ್ರಾಟ್ ಕೈಗೊಂಡ ಶ್ಲಾಘನೀಯ ಚಟುವಟಿಕೆಗಳನ್ನು ಅಭಿನಂದಿಸಿ, ಮುಂದಿನ ಯೋಜನೆಗಳಿಗೆ ಶುಭ ಹಾರೈಸಿದರು.
ನಿರ್ಗಮಿತ ಅಧ್ಯಕ್ಷ ಜೇಸಿ ಅನುಷ್ ಚಂದ್ರ ಅವರು ಅಧ್ಯಕ್ಷೆ ಜೇಸಿ ದೀಪಾ ರಾವ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಜೇಸಿ ಅನುಷ್ ಚಂದ್ರ ತಮ್ಮ ಅವಧಿಯಲ್ಲಿನ ಸಾಧನೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಬೆಂಬಲ ನೀಡಿದ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷೆ ಜೇಸಿ ದೀಪಾ ರಾವ್ ಮಾತನಾಡಿ, ಎಲ್ಲಾ ಸದಸ್ಯರ ಸಾಮೂಹಿಕ ಬೆಂಬಲದೊಂದಿಗೆ ಸ್ಥಳೀಯ ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಂಸ್ಥಾಪಕ ಅಧ್ಯಕ್ಷ ಜೇಸಿ ಡಾ.ರಾಘವೇಂದ್ರ ಹೊಳ್ಳ, ಮಾಜಿ ಅಧ್ಯಕ್ಷರಾದ ಜೇಸಿ ಉಮೇಶ ನಾಗನವಲಚ್ಚಿಲ್, ಜೇಸಿ ಟಿನಿ ಡಿ’ಕೋಸ್ತ, ಜೇಸಿ ಕಾರ್ತಿಕ್, ಜೇಸಿ ಅಕ್ಷತಾ, ಜೇಸಿ ಸುಮನಾ ಪೊಳಲಿ, ಜೇಸಿ ವೀಣಾ ಉಪಸ್ಥಿತರಿದ್ದರು.
ನೂತನ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು:
ಅಧ್ಯಕ್ಷರು: ಜೆ.ಸಿ.ದೀಪಾ ರಾವ್, ನಿಕಟಪೂರ್ವ ಅಧ್ಯಕ್ಷರು: ಜೆ.ಸಿ.ಅನುಷ್ ಚಂದ್ರ, ಕಾರ್ಯದರ್ಶಿ: ವರುಣ್ ಪ್ರಭು, ಖಜಾಂಚಿ: ಶ್ರವಣ್ ಕುಮಾರ್, ಜಂಟಿ ಕಾರ್ಯದರ್ಶಿ: ಅಲ್ವಿನ್, ವಿ.ಪಿ.ಎಲ್.ಒ: ಯತೀಶ್, ಉಪಾಧ್ಯಕ್ಷರು ತರಬೇತಿ: ವಿಕ್ರಂ ನಾಯಕ್, ಉಪಾಧ್ಯಕ್ಷರು ಕಾರ್ಯಕ್ರಮ: ಪೂಜಾ ರಾವ್, ಉಪಾಧ್ಯಕ್ಷರು G&D.: ಸ್ವಾತಿ , ಉಪಾಧ್ಯಕ್ಷರು ಬಿಸಿನೆಸ್: ಶರೀಫ್, ಉಪಾಧ್ಯಕ್ಷರು PR & ಮಾರ್ಕೆಟಿಂಗ್: ಅನನ್ಯ ರಾವ್, ನಿರ್ದೇಶಕ LO: ವಿಜೇಶ್, ನಿರ್ದೇಶಕರು ತರಬೇತಿ: ವರ್ಷಾ ಶೆಟ್ಟಿ, ನಿರ್ದೇಶಕರು ಕಾರ್ಯಕ್ರಮ: ಮಹೇಶ್ ಮಯ್ಯ, ನಿರ್ದೇಶಕರು G&D: ಸುಪ್ರಿಯಾ, ನಿರ್ದೇಶಕರು ಬಿಸಿನೆಸ್: ಸುಹಾಸ್, ನಿರ್ದೇಶಕರು PR & ಮಾರ್ಕೆಟಿಂಗ್: ಕೆನ್ಯೂಟ್ ಪಿಂಟೊ.