ಮಂಗಳೂರು(ಅಂಕಾರ): 12 ಸಿಬ್ಬಂದಿಗಳಿರುವ ಟರ್ಕಿಯ ಸರಕು ನೌಕೆಯೊಂದು ಕಪ್ಪುಸಮುದ್ರದಲ್ಲಿ ಮುಳುಗಿದೆ. ತೀವ್ರ ಬಿರುಗಾಳಿ ರಕ್ಷಣೆ ಮತ್ತು ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಟರ್ಕಿಯ ಆಂತರಿಕ ಸಚಿವ ಆಲಿ ಎರ್ಲಿಕಯ ತಿಳಿಸಿದ್ದಾರೆ.
ಇಸ್ತಾನ್‍ಬುಲ್‍ನಿಂದ ಪೂರ್ವಕ್ಕೆ ಸುಮಾರು 200 ಕಿ.ಮೀ ದೂರದಲ್ಲಿರುವ ಎರೆಗ್ಲಿ ನಗರದ ಬಂದರಿನ ಹೊರಗೆ ಬ್ರೇಕ್‍ವಾಟರ್ಗೆ ಅಪ್ಪಳಿಸಿದ ಬಳಿಕ ಹಡಗು ಮುಳುಗಿದೆ. ಹಡಗಿನಲ್ಲಿ 12 ಸಿಬ್ಬಂದಿಗಳಿದ್ದು ಹವಾಮಾನ ಪರಿಸ್ಥಿತಿ ಸುಧಾರಿಸುವವರೆಗೆ ರಕ್ಷಣಾ ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ಎರೆಗ್ಲಿ ಬಂದರು ಪ್ರದೇಶದಲ್ಲಿ ಸಮುದ್ರದ ನೀರು ಅಪಾಯಕಾರಿ ಮಟ್ಟದಲ್ಲಿ ಏರುತ್ತಿರುವುದರಿಂದ ಎರೆಗ್ಲಿ ಜೈಲಿನ ಕೈದಿಗಳನ್ನು ಸಮೀಪದ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಕಾನೂನು ಇಲಾಖೆಯ ಸಚಿವ ಯಿಲ್ಮಾಝ್ ಟಂಕ್ ಹೇಳಿದ್ದಾರೆ.