ನಿಗಮ ಮಂಡಳಿಗೆ ನೇಮಕಾತಿಗೆ ಕಸರತ್ತು- ಹಿರಿಯ ಶಾಸಕರಿಗೆ ಒತ್ತು-ಸುರ್ಜೇವಾಲ ನೇತೃತ್ವದಲ್ಲಿ ಸಭೆ- ಸಂಭಾವ್ಯರ ಪಟ್ಟಿ ಸಿದ್ಧ

ಮಂಗಳೂರು(ಬೆಂಗಳೂರು): ಸರ್ಕಾರದ ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿ ಪಟ್ಟಿಗೆ ಅಂತಿಮ ಕಸರತ್ತು ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ, ಸಂಭಾವ್ಯರ ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದೆ. ಹಿರಿಯ ಶಾಸಕರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ರಣದೀಪ್ ಸಿಂಗ್ ಸುರ್ಜೇವಾಲ, ಮೊದಲು ನಿಗಮ, ಮಂಡಳಿ ಸ್ಥಾನ ವಹಿಸಿಕೊಳ್ಳುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರಾದ ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್ ಸಭೆಯಲ್ಲಿ ಭಾಗವಹಿಸಿದ್ದರು. ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಜೊತೆಗೂ ಸುರ್ಜೇವಾಲ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಂಭಾವ್ಯರ ಶಾಸಕರ ಪಟ್ಟಿ ಇಲ್ಲಿದೆ:
ಪಿ.ಎಂ ನರೇಂದ್ರ ಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಅನಿಲ್ ಚಿಕ್ಕಮಾದು, ಟಿ.ಡಿ ರಾಜೇಗೌಡ, ಶಿವಲಿಂಗೇಗೌಡ, ಬಿ.ಕೆ ಸಂಗಮೇಶ್, ಬಂಗಾರಪೇಟೆ ನಾರಾಯಣಸ್ವಾಮಿ, ಕೆ.ವೈ ನಂಜೇಗೌಡ, ಬಿ.ಆರ್ ಪಾಟೀಲ್, ಗಣೇಶ್ ಹುಕ್ಕೇರಿ, ಮಹಾಂತೇಶ್ ಕೌಜಲಗಿ, ಯಶವಂತ್ ರಾಯ್ ಗೌಡ ಪಾಟೀಲ್, ಬಿ.ಜಿ ಗೋವಿಂದಪ್ಪ, ರಾಘವೇಂದ್ರ ಹಿಟ್ನಾಳ್, ರಘುಮೂರ್ತಿ, ಭೀಮಣ್ಣ ನಾಯ್ಕ್, ಸತೀಶ್ ಸೈಲ್, ಪ್ರಸಾದ್ ಅಬ್ಬಯ್ಯ, ಜಿ.ಟಿ ಪಾಟೀಲ್, ಡಿ.ಆರ್ ಪಾಟೀಲ್, ಬಸನಗೌಡ ತುರುವಿಹಾಳ್

 

LEAVE A REPLY

Please enter your comment!
Please enter your name here