ಮಹಿಳೆಯ ಪಿತ್ತಜನಕಾಂಗದಿಂದ 345 ಕಲ್ಲುಗಳನ್ನು ತೆಗೆದ ವೈದ್ಯರು- ಆಸ್ಟರ್ ಆರ್‌ವಿ ಆಸ್ಪತ್ರೆ ವೈದ್ಯರ ಸಾಧನೆ

ಮಂಗಳೂರು(ಬೆಂಗಳೂರು): ಇಲ್ಲಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಮಹಿಳೆಯೊಬ್ಬರ ಪಿತ್ತಕೋಶದಲ್ಲಿದ್ದ 345 ಕಲ್ಲುಗಳನ್ನು ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.

51 ವರ್ಷದ ಮಹಿಳೆ ಒಂದು ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಪರೀಕ್ಷೆ ಮಾಡಿದಾಗ ಪಿತ್ತಕೋಶ ಬಾತುಕೊಂಡಿರುವುದು ಕಂಡು ಬಂತು. ಪಿತ್ತಕೋಶವನ್ನು ಕೇವಲ 1 ಸೆಂಟಿಮೀಟರ್‌ ಸೀಳುವ ಮೂಲಕ ಕಲ್ಲುಗಳನ್ನು ತೆಗೆಯಬಹುದಾದ ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಮುಖ್ಯ ಕನ್ಸಲ್ಟೆಂಟ್‌ ಡಾ. ಗಿರೀಶ್‌ ಹೇಳಿದ್ದಾರೆ.

‘ಪಿತ್ತಕೋಶದ ಗಾತ್ರ ಮತ್ತು ಕಲ್ಲುಗಳ ಸಂಖ್ಯೆಯಿಂದಾಗಿ ಈ ಶಸ್ತ್ರಚಿಕಿತ್ಸೆಯು ಸವಾಲಿನದ್ದಾಗಿತ್ತು. ಸೂಕ್ಷ್ಮವಾಗಿ ನಿರ್ವಹಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ. ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಕನ್ಸಲ್ಟೆಂಟ್‌ ಜನರಲ್‌ ಡಾ. ಶಿವಪ್ರಸಾದ್‌ ಗಿಳಿಯಾರು ಶ್ರೀನಿವಾಸ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here