ಮಾದಕ ದ್ರವ್ಯಕ್ಕೆ ಅಡಿಕ್ಟ್‌ ಆದ ದಂಪತಿ-ಮಕ್ಕಳ ಮೇಲಿಲ್ಲದ ಸಿಂಪತಿ-ಡ್ರಗ್ಸ್‌ ಖರೀದಿಗೆ ಹೆತ್ತ ಮಕ್ಕಳನ್ನೇ ಮಾರಿದ ಸಾನಿಯಾ, ಶಕೀಲ್‌ ದಂಪತಿ

ಮಂಗಳೂರು(ಮುಂಬೈ): ಡ್ರಗ್ಸ್‌ ಖರೀದಿಸಲು ಹೆತ್ತ ಮಕ್ಕಳನ್ನೇ ಮಾರಾಟ ಮಾಡಿದ ಆರೋಪದ ಮೇಲೆ ದಂಪತಿ ಸೇರಿದಂತೆ ಮೂವರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಪೋಷಕರಾದ ಶಬ್ಬೀರ್‌, ಸಾನಿಯಾ ಮತ್ತು ಶಕೀಲ್‌ ಮಕ್ರಾನಿ ಬಂಧಿತ ಆರೋಪಿಗಳು. ಅಲ್ಲದೇ ಮಾರಾಟದಿಂದ ಕಮಿಷನ್ ಪಡೆದ ಆರೋಪಿ ಉಷಾ ರಾಥೋಥ್‌ ಎಂಬಾಕೆಯನ್ನೂ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ನ.24ರಂದು ಅಂಧೇರಿಯಲ್ಲಿ ಒಂದು ತಿಂಗಳ ಮಗುವನ್ನು ರಕ್ಷಣೆ ಮಾಡಿದ್ದು, 2 ವರ್ಷದ ಮತ್ತೊಂದು ಮಗುವಿಗಾಗಿ ಹುಡುಕಾಟ ನಡೆದಿದೆ. ಮಾದಕ ವ್ಯಸನಿಗಳಾಗಿದ್ದ ದಂಪತಿ ಅಂಧೇರಿಯಲ್ಲಿ ತಮ್ಮ ಇಬ್ಬರು ಮಕ್ಕಳನ್ನು ಮಾರಾಟ ಮಾಡಿ ಹಣ ಸಂಪಾದಿಸಿದ್ದಾರೆ. ಗಂಡು ಮಗುವನ್ನು 60 ಸಾವಿರ ರೂ.ಗೆ, ಒಂದು ತಿಂಗಳ ಹೆಣ್ಣು ಮಗುವನ್ನು 14 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಿಕಿಗೆ ಬಂದಿದೆ.

 

LEAVE A REPLY

Please enter your comment!
Please enter your name here