ನೀವು ಗೂಗಲ್‌ ಪೇ ಬಳಸುತ್ತಿದ್ದೀರಾ? – ಹಾಗಿದ್ದಲ್ಲಿ ಇದನ್ನು ತಿಳಿದುಕೊಳ್ಳಲೇ ಬೇಕು

ಮಂಗಳೂರು: ಯುಪಿಐ ವಹಿವಾಟುಗಳಿಗಾಗಿ ಗೂಗಲ್ ಪೇ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಇದು ಜನಪ್ರಿಯವಾಗಿದೆ.ಎಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಫೋನ್ ಸಂಖ್ಯೆಯನ್ನು ನಮೂದಿಸಿ ಇದರ ಮೂಲಕ ಸುಲಭವಾಗಿ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಇದರ ನಡುವೆ ಆನ್‌ಲೈನ್ ವಂಚನೆಗಳೂ ಹೆಚ್ಚುತ್ತಿವೆ. ಸೈಬರ್ ಭದ್ರತೆ ಎಷ್ಟೇ ಬಲಿಷ್ಠವಾಗಿದ್ದರೂ ಬಳಕೆದಾರರು ಮಾಡುವ ಸಣ್ಣಪುಟ್ಟ ತಪ್ಪುಗಳು ಅಪರಾಧಿಗಳಿಗೆ ವರದಾನವಾಗಿ ಪರಿಣಮಿಸುತ್ತದೆ. ಯುಪಿಐ ಪಾವತಿ ಸಮಯದಲ್ಲಿ ಕೆಲವು ಆ್ಯಪ್‌ಗಳನ್ನು ಬಳಸಬಾರದು ಎಂದು ಗೂಗಲ್ ಪೇ ಹೇಳಿದೆ. ಈ ಆ್ಯಪ್‌ಗಳು ನಿಮ್ಮ ಫೋನ್‌ನಲ್ಲಿದ್ದರೆ. ಖಾತೆಗಳನ್ನು ಹ್ಯಾಕ್ ಮಾಡುವ ಅಪಾಯವಿದೆ ಎಂದಿದೆ.

ತಮ್ಮ ಫೋನ್‌ಗಳಲ್ಲಿ ಸ್ಕ್ರೀನ್ ಹಂಚಿಕೆ (ಸ್ಕ್ರೀನ್ ಶೇರಿಂಗ್) ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸಿದಾಗ ಗೂಗಲ್ ಪೇ ಬಳಸಬಾರದು ಎಂಬ ಎಚ್ಚರಿಕೆ ಸಂದೇಶವನ್ನು ಗೂಗಲ್‌ ನೀಡಿದೆ. ಗೂಗಲ್ ಪೇ ಅನ್ನು ಬಳಸುವಾಗ ನೀವು ಯಾವುದೇ ಸಂದರ್ಭಗಳಲ್ಲಿ ಎನಿ ಡೆಸ್ಕ್, ಟೀಮ್‌ ವೀವರ್ ನಂತಹ ಯಾವುದೇ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್ ಅನ್ನು ಬಳಸಬಾರದು ಎಂದು ಹೇಳಿದೆ. ಕೆಲಸದ ಸಂದರ್ಭ ಏನಾದರು ತೊಂದರೆ ಆಯಿತು ಎಂದಾದರೆ, ರಿಮೋಟ್ ಕಂಟ್ರೊಲ್ ತೆಗೆದುಕೊಳ್ಳಲು ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳು ಉಪಯುಕ್ತವಾಗಿವೆ. ಆದರೆ ಕೆಲವು ಕಂಪನಿಗಳು ಇದರಿಂದ ಬಳಕೆದಾರರನ್ನು ಮೋಸಗೊಳಿಸಬಹುದು. ಬಳಕೆದಾರರು ಬ್ಯಾಂಕಿಂಗ್ ವಹಿವಾಟು ಮಾಡುವಾಗ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಗೂಗಲ್ ಹೇಳಿದೆ.

‘ಗೂಗಲ್ ಪೇ ಯಾವುದೇ ಕಾರಣಕ್ಕೂ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಅಥವಾ ಇನ್‌ಸ್ಟಾಲ್ ಮಾಡಲು ನಿಮ್ಮನ್ನು ಕೇಳುವುದಿಲ್ಲ. ನೀವು ಈಗಾಗಲೇ ಈ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ., ನೀವು ಗೂಗಲ್ ಪೇ ಅನ್ನು ಬಳಸುವ ಮೊದಲು ಅವುಗಳನ್ನು ಕ್ಲೋಸ್ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಗೂಗಲ್ ಪೇನ ಪ್ರತಿನಿಧಿಯಾಗಿರುವ ಯಾರಾದರೂ ನಿಮ್ಮನ್ನು ಫೋನ್ ಮೂಲಕ ಸಂಪರ್ಕಿಸಲು ಅಥವಾ ನೇರವಾಗಿ ಈ ರೀತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಲಹೆ ನೀಡಿದರೆ., ತಕ್ಷಣವೇ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ’ ಎಂದು ಗೂಗಲ್ ಪೇ ಹೇಳಿದೆ.

 

LEAVE A REPLY

Please enter your comment!
Please enter your name here