ಮಂಗಳೂರು(ಬೆಂಗಳೂರು): ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನ.22ರಂದು ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಸೋಮಸುಂದರಪಾಳ್ಯ ಚಿತಾಗಾರದಲ್ಲಿ ನಡೆಯಿತು.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್ನ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಯೋಧನ ಪಾರ್ಥಿವ ಶರೀರವನ್ನು ನಂದನವನ ಬಡಾವಣೆಯಿಂದ ಜಿಗಣಿಯ ಓಟಿಸಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ನೈಸ್ ರೋಡ್ ಸಂಪರ್ಕ, ಕೋನಪ್ಪನ ಅಗ್ರಹಾರ ವೃತ್ತ, ಕೂಡ್ಲು ಗೇಟ್ ಮಾರ್ಗವಾಗಿ ಸೋಮಸುಂದರ ಪಾಳ್ಯ ಚಿತಾಗಾರಕ್ಕೆ ತರಲಾಯಿತು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Thousands of people gathered in the procession of Captain MV Pranjal, who lost his life in action during the Rajouri encounter in Kashmir
A touching tribute to Captain MV Pranjal, evident by the overwhelming turnout in Bengaluru
Miss you Captain sir ?? Rest in Peace ?️ https://t.co/dPVD71b2KT pic.twitter.com/VCsCupm1jy
— Karnataka Weather (@Bnglrweatherman) November 25, 2023