ಖಾಸಗಿ ಜೆಟ್‌ನಲ್ಲಿ‌ ಉದ್ಯಮಿ ಮಗಳ ಮದುವೆ – ಲೋಹದ ಹಕ್ಕಿಯಲ್ಲಿ ತಾಳಿ ಕಟ್ಟಿದ ವರ – ವಿಡಿಯೋ ವೈರಲ್

ಮಂಗಳೂರು(ದುಬೈ): ಅನಿವಾಸಿ ಭಾರತೀಯ ಉದ್ಯಮಿಯೊಬ್ಬರು ತಮ್ಮ ಮಗಳ ಮದುವೆಯನ್ನು ಖಾಸಗಿ ಜೆಟ್‌ ವಿಮಾನದಲ್ಲಿ ನಡೆಸುವ ಮೂಲಕ‌ ಸುದ್ದಿಯಾಗಿದ್ದಾರೆ. ಯುಎಇ ಮೂಲದ ಭಾರತೀಯ ಉದ್ಯಮಿ ದಿಲೀಪ್ ಪೋಪ್ಲಿ ಎಂಬುವರು ತಮ್ಮ ಮಗಳ ಮದುವೆಯನ್ನು ಖಾಸಗಿ ಜೆಟ್‌ ವಿಮಾನ ಬೋಯಿಂಗ್‌ 747ರಲ್ಲಿ ನ.24 ರಂದು ಅದ್ದೂರಿಯಾಗಿ ನೆರವೇರಿಸಿದ್ದಾರೆ.

ಬಾಲಿವುಡ್‌ ಸಿನಿಮಾ ಹಾಡೊಂದಕ್ಕೆ ಆಹ್ವಾನಿತರು ವಿಮಾನದೊಳಗೆ ನೃತ್ಯ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನ.24 ರಂದು ಬೋಯಿಂಗ್‌ 747 ವಿಮಾನದಲ್ಲಿ ವಿವಾಹ ಸಮಾರಂಭ ನಡೆಯಿತು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ವಧು ಮತ್ತು ವರ ಸೇರಿ ಕುಟುಂಬವು ದುಬೈನಿಂದ ಒಮಾನ್‌ಗೆ ಮೂರು ಗಂಟೆ ಕಾಲ ಪ್ರಯಾಣಿಸಿತು, ಈ ಸಮಯದಲ್ಲಿ ವಿವಾಹ ಸಮಾರಂಭ ನಡೆದಿದೆ ಎಂದು ವರದಿ ತಿಳಿಸಿದೆ. ಅಚ್ಚರಿಯ ವಿಷಯವೆಂದರೆ ವಧುವಿನ ತಂದೆ ಪೋಪ್ಲಿ ಅವರು 1994ರಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮದುವೆಯಾಗಿದ್ದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here