ಮಹಿಳೆ ಕೊಲೆ‌ಗೈದು ಹೃದಯವನ್ನು ಸಾಂಬಾರ್ ಮಾಡಿ ಮನೆಯವರಿಗೆ ಉಣ ಬಡಿಸಿದ ಹಂತಕ – ಲಾರೆನ್ಸ್ ಪಾಲ್ ಆಂಡರ್ಸನ್ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ನೀಡಿದ ಅಮೇರಿಕಾದ ನ್ಯಾಯಾಲಯ

ಮಂಗಳೂರು (ವಾಷಿಂಗ್ಟನ್): ತ್ರಿವಳಿ ಕೊಲೆಯ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬನ ಕೃತ್ಯ ಈಗ ಜಗಜ್ಜಾಹೀರಾಗಿದೆ. ಕೊಲೆ ಮಾಡಿದ ನಂತರ ಶವವನ್ನು ಕತ್ತರಿಸಿ ಹೃದಯವನ್ನು ತರಕಾರಿ ಜತೆ ಬೇಯಿಸಿ ಸಾಂಬಾರ್ ಮಾಡಿ ಮನೆಯವರಿಗೆ ಉಣ ಬಡಿಸಿರುವ ವಿಚಿತ್ರ ಮತ್ತು ಹೇಯ ಘಟನೆ ಅಮೆರಿಕದ ಒಕ್ಲಹೋಮದಲ್ಲಿ ನಡೆದಿದೆ.

ಈ ವ್ಯಕ್ತಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಮೃತದೇಹದಿಂದ ಹೃದಯವನ್ನು ತೆಗೆದು ಆಲೂಗಡ್ಡೆಯೊಂದಿಗೆ ಬೇಯಿಸಿ ಅಡುಗೆ ಮಾಡಿ ಬಡಿಸಿದ್ದಾನೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಮೃತ ಮಹಿಳೆಯ ಹೃದಯವನ್ನು ತನ್ನ ಚಿಕ್ಕಪ್ಪನ ಮನೆಗೆ ತಂದು ಅಲ್ಲಿ ಅದನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಚಿಕ್ಕಪ್ಪ ಮತ್ತು ಅವರ ಮಡದಿಗೆ ಬಡಿಸಿದ್ದಾನೆ ಎಂದು ತನಿಖಾಧಿಕಾರಿಗಳು ಚಿಕಾಶಾದ ಗ್ರೇಡಿ ಕೌಂಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಿ ಆಂಡರ್ಸನ್ ಆ ಮನೆಯಲ್ಲಿದ್ದ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಮೊಮ್ಮಗಳನ್ನು ಕೂಡ ಕೊಂದಿದ್ದಾನೆ. ತನ್ನ ಚಿಕ್ಕಪ್ಪನಿಗೆ ಚಾಕುವಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿದ್ದಾನೆ. ಈ ಮೊದಲು ಕೂಡ ಕೊಲೆ ಮಾಡಿರುವ ಆರೋಪ ಹೊತ್ತಿರುವ ಆಂಡರ್ಸನ್ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಇತ್ತೀಚೆಗೆ ಆತ ಉತ್ತಮ ನಡವಳಿಕೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಕೆಲವೇ ವಾರಗಳ ನಂತರ ಈ ಅಪರಾಧ ಎಸಗಿದ್ದಾನೆ. 2017ರಲ್ಲಿ ಮಾದಕವಸ್ತು ಆರೋಪದ ಮೇಲೆ ಆಂಡರ್ಸನ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

2021ರಲ್ಲಿ ನಡೆದ ಈ ಘಟನೆಗೆ ಸಂಬಂಧ ಪಟ್ಟಂತೆ ಕಳೆದ 2023ರ ಮಾರ್ಚ್‌ ತಿಂಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುತ್ತಿದೆ.

LEAVE A REPLY

Please enter your comment!
Please enter your name here