ಮಂಗಳೂರು (ಅಹ್ಮದಾಬಾದ್): ಗುಜರಾತ್‌ನ ಖೇಡಾ ಜಿಲ್ಲೆಯ ನಡಿಯೆಡ್ ಎಂಬಲ್ಲಿ ಕಲುಷಿತ ಆಯುರ್ವೇದಿಕ್ ಸಿರಪ್ ಸೇವಿಸಿ ಕಳೆದೆರಡು ದಿನಗಳಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಮೇಘಸವ್-ಅಸವ ಅರಿಷ್ಟʼ ಎಂಬ ಹೆಸರಿನ ಈ ಆಯುರ್ವೇದಿಕ್ ಸಿರಪ್ ಅನ್ನು ನಡಿಯೆಡ್ ಪಟ್ಟಣದ ಬಿಲೋದರ ಗ್ರಾಮದ ಅಂಗಡಿಯಲ್ಲಿ ಸುಮಾರು 50 ಜನರಿಗೆ ಓವರ್ ದಿ ಕೌಂಟರ್ ಮಾರಾಟ ಮಾಡಲಾಗಿತ್ತು. ಈ ಸಿರಪ್‌ನಲ್ಲಿ ವಿಷಕಾರಿ ಮಿಥೈಲ್ ಆಲ್ಕೋಹಾಲ್ ಅಂಶವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಗ್ರಾಮಸ್ಥರೊಬ್ಬರ ರಕ್ತದ ಮಾದರಿ ಪರೀಕ್ಷಿಸಿದಾಗ ಮಾರಾಟ ಮಾಡುವ ಮುನ್ನ ಸಿರಪ್‌ಗೆ ಮಿಥೈಲ್ ಆಲ್ಕೋಹಾಲ್ ಸೇರಿಸಿದ್ದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲಕ ಸಹಿತ ಮೂವರನ್ನು ವಶಕ್ಕೆ ಪಡದು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.