ಅಪರೇಷನ್ ಕಮಲನೂ ಮಾಡ್ತಾರೆ-ಇರುವವರನ್ನೂ ಕಳಿಸ್ತಾರೆ – ಈಶ್ವರಪ್ಪ ಹೇಳಿಕೆಗೆ ದಿನೇಶ್ ಗುಂಡೂರಾವ್ ಟಾಂಗ್

ಮಂಗಳೂರು: ಜಗದೀಶ್ ಶೆಟ್ಟರ್ ಬಿಜೆಪಿ ವಾಪಾಸ್ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರದಲ್ಲಿ ಮಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಈಶ್ವರಪ್ಪ ಹೇಳಿಕೆ ಕೊಡೋದ್ರಲ್ಲಿ ನಿಸ್ಸೀಮರು. ತಾನು ಪಕ್ಷ ಬಿಡಲು ಈಶ್ವರಪ್ಪವರೇ ಕಾರಣವೆಂದು ಜಗದೀಶ್ ಶೆಟ್ಟರ್ ಆವತ್ತೇ ಹೇಳಿದ್ದರು‌. ಬೇರೆ ಪಕ್ಷದವರನ್ನು ಅಪರೇಷನ್ ಕಮಲ ಮಾಡಿ ತಮ್ಮ ಪಕ್ಷಕ್ಕೆ ತೆಗೆದುಕೊಂಡು, ಅವರು ಮತ್ತೆ ಅವರ ಪಕ್ಷಕ್ಕೆ ಹೋಗುವಾಗ ಅವರು ಒಪ್ಕೊಬೇಕು. ಅಪರೇಷನ್ ಕಮಲನೂ ಮಾಡುತ್ತಾರೆ. ಇರುವವರನ್ನೂ ಕಳಿಸ್ತಾರೆ. ಒಂದು ಕಡೆ ಇರಿ. ಅಥವಾ ಹೊರಗಿನವರನ್ನು ಸೇರಿಸಬೇಡಿ. ಇರುವವರನ್ನು ಕಳುಹಿಸಬೇಡಿ ಎಂದು ಟಾಂಗ್ ನೀಡಿದರು.

ಪಂಚರಾಜ್ಯ ಚುನಾವಣೆ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ವಿಚಾರದಲ್ಲಿ ಮಾತನಾಡಿ, ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ.‌ ಕೇಂದ್ರ ಸರ್ಕಾರ ವೈಭವೀಕರಣ ಮಾಡುತ್ತಿದೆ‌. ಆದ್ದರಿಂದ ಈ ಅಸೆಂಬ್ಲಿ ರಿಸಲ್ಟ್ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಪಂಚರಾಜ್ಯ ಫಲಿತಾಂಶದಲ್ಲಿ ‌ಕಾಂಗ್ರೆಸ್ ತೀವ್ರ ಪೈಪೋಟಿ ಕೊಟ್ಟಿದೆ. ಕಾಂಗ್ರೆಸ್ ಮುಕ್ತವೆಂದು ಹೇಳಿಕೊಂಡು ತಿರುಗುತ್ತಿದ್ದ ಬಿಜೆಪಿಯೇ ಈಗ ಮುಕ್ತ ಆಗುತ್ತಿದೆ. ಪಾರ್ಲಿಮೆಂಟ್ ಇಲೆಕ್ಷನ್ ಮತ್ತು ಅಸೆಂಬ್ಲಿ ಇಲೆಕ್ಷನ್ ಆದರೂ ಸದ್ಯ‌ ದ.ಕ ಬಿಜೆಪಿ ಮುಕ್ತ ಆಗಲಿದೆ. ಹೀಗಾಗಿ ಇವರು ಮುಕ್ತ ಅನ್ನುವ ಮಾತು ಬಿಡಲಿ, ಬಿಜೆಪಿಯೇ ಮುಕ್ತ‌ ಆಗ್ತಿದೆ.‌ ಸರ್ವಾಧಿಕಾರ ಮತ್ತು ಪ್ರಶ್ನಾತೀತ ಯೋಚನೆ ಇರಬಾರದು ಎಂದರು.

ಮಂಗಳೂರಿನಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ಹೆಚ್ಚಳ ವಿಚಾರದಲ್ಲಿ ಮಾತನಾಡಿ, ಅನೈತಿಕ ಪೊಲೀಸ್ ಗಿರಿ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇವೆ.‌ ಯಾರೂ ಕಾನೂನು ಕೈಗೆತ್ತಿಕೊಳ್ಳದಂತೆ ತಡೆಯಲು ಹೇಳಿದ್ದೇವೆ.‌ ಕೋಮುವಾದ, ಅನೈತಿಕ ಪೊಲೀಸ್ ಗಿರಿ ಅಗತ್ಯ ಇಲ್ಲ. ಜನರಿಗೆ ಜೀವನ ನಡೆಸಲು ಅಭಿವೃದ್ಧಿಬೇಕು. ಅದಷ್ಟೇ ಈಗಿನ ಅಗತ್ಯ. ಪ್ರಜಾಪ್ರಭುತ್ವದಲ್ಲಿ ಬೇರೆ ಏನೂ ಮಾಡಲು ಅವಕಾಶ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

LEAVE A REPLY

Please enter your comment!
Please enter your name here