ಲಂಚ ಪಡೆಯುತ್ತಿದ್ದಾಗ ‘ರೆಡ್‌ಹ್ಯಾಂಡ್‌’ ಆಗಿ ಸಿಕ್ಕಿ ಬಿದ್ದ ಈ.ಡಿ ಅಧಿಕಾರಿ-ವೈದ್ಯನೋರ್ವನಿಂದ 20 ಲಕ್ಷ ಲಂಚ – 15 ದಿನಗಳ ನ್ಯಾಯಾಂಗ ಬಂಧನ

ಮಂಗಳೂರು(ತಮಿಳುನಾಡು): ತಮಿಳುನಾಡಿನ ದಿಂಡಿಗಲ್‌ನಲ್ಲಿ ಪ್ರಕರಣ ಮುಚ್ಚಿಸುವುದಾಗಿ ಬೆದರಿಸಿ, ವೈದ್ಯನೋರ್ವನಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಜಾರಿ ನಿರ್ದೇಶನಾಲಯ ಅಧಿಕಾರಿಯೊಬ್ಬ ‘ರೆಡ್‌ಹ್ಯಾಂಡ್‌’ ಆಗಿ ಸಿಕ್ಕಿಬಿದ್ದಿದ್ದಾರೆ.  ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಈ.ಡಿ ಅಧಿಕಾರಿಯನ್ನು ಬಂಧಿಸಿದೆ. ದಿಂಡಿಗಲ್-ಮಧುರೈ ಹೆದ್ದಾರಿಯಲ್ಲಿ ಎಂಟು ಕಿಲೋಮೀಟರ್ ಬೆನ್ನಟ್ಟಿದ ನಂತರ ಈಡಿ ಅಧಿಕಾರಿಯನ್ನು ಲಂಚದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಬೆಳವಣಿಗೆ ಸದ್ಯ ತಮಿಳುನಾಡಿನಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ದಿಂಡಿಗಲ್‌ನಲ್ಲಿ ಬಂಧಿಸಲ್ಪಟ್ಟ ನಂತರ, ಡಿವಿಎಸಿ ಅಧಿಕಾರಿಗಳ ತಂಡವು ಮಧುರೈನ ಉಪ-ಪ್ರಾದೇಶಿಕ ಈಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಬಂಧಿತ ಅಧಿಕಾರಿಯನ್ನು ಅಂಕಿತ್ ತಿವಾರಿ ಎಂದು ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿರುವ ಮಧುರೈ ಜಾರಿ ನಿರ್ದೆಶನಾಲಯದ ಕಚೇರಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೆಡ್‌ಹ್ಯಾಂಡಾಗಿ ಸಿಕ್ಕ ಬಳಿಕ ಡಿವಿಎಸಿ ಅಧಿಕಾರಿಗಳು ಅಧಿಕಾರಿಯ ಮನೆ ಮೇಲೂ ದಾಳಿ ನಡೆಸಿದ್ದಾರೆ.

ವಶಕ್ಕೆ ಪಡೆದುಕೊಂಡ ಅಧಿಕಾರಿ ಅಂಕಿತ್ ತಿವಾರಿಯನ್ನು ದಿಂಡಿಗಲ್‌ನ ಮ್ಯಾಜಿಸ್ಟ್ರೇಟ್ ಮುಂದೆ ಡಿ.1ರಂದು ತಡರಾತ್ರಿ ಹಾಜರುಪಡಿಸಿದ್ದು ನ್ಯಾಯಾಧೀಶರು ಡಿಸೆಂಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ದಿಂಡಿಗಲ್‌ನಲ್ಲಿ ವೈದ್ಯರೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮುಚ್ಚಿ ಹಾಕುವ ಹೆಸರಿನಲ್ಲಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹದ ಅಧಿಕಾರಿಗಳಿಗೆ ವೈದ್ಯರು ದೂರು ನೀಡಿದ್ದರು ಎಂದು ವರದಿಯಾಗಿದೆ. ವೈದ್ಯನಿಂದ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿ ಬಿದ್ದಿದ್ದಾನೆ. ಡಿಎಂಕೆ ಸಂಸದ ದಯಾನಿಧಿ ಮಾರನ್ ಈಡಿ ಎಂದರೆ “ಸುಲಿಗೆ ಇಲಾಖೆ” ಎಂದು ಕರೆದಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ರಾಜಕೀಯ ವಿರೋಧಿಗಳು ಮತ್ತು ಟೀಕಾಕಾರರನ್ನು ಗುರಿಯಾಗಿಸಲು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ‘ತಿವಾರಿ ಅವರ ಕೃತ್ಯಕ್ಕೆ ಜಾರಿ ನಿರ್ದೇಶನಾಲಯವನ್ನು ದೂಷಿಸಲಾಗುವುದಿಲ್ಲ’ ಎಂದು ಭಾರತೀಯ ಜನತಾ ಪಕ್ಷವು ಸಮರ್ಥಿಸಿಕೊಂಡಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here