ಮೈಚಾಂಗ್ ಚಂಡಮಾರುತ-ಭಾರೀ‌ ಮಳೆಗೆ ಚೆನ್ನೈ ಜನಜೀವನ ಅಸ್ತವ್ಯಸ್ತ – ಆರು ಮಂದಿ ಸಾವು

ಮಂಗಳೂರು(ಚೆನ್ನೈ): ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ಸೇರಿ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿಗಳಲ್ಲೂ ವ್ಯಾಪಕ‌ ಮಳೆಯಾಗುತ್ತಿದ್ದು, ಮಹಾಮಳೆಗೆ ತಮಿಳುನಾಡಿನಲ್ಲಿ ಐವರು, ನೆಲ್ಲೂರಿನಲ್ಲಿ‌ ಓರ್ವ ಸೇರಿ ಆರು‌‌ ಮಂದಿ ಬಲಿಯಾಗಿದ್ದಾರೆ. ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದು, ಎಲ್ಲ ವಿಮಾನಗಳನ್ಜು ಬೆಂಗಳೂರಿಗೆ ಡೈವರ್ಟ್ ಮಾಡಲಾಗಿದೆ. ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಶಾಲಾ‌ ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಿಸಲಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚೆನ್ನೈನ ಹಲವು ಭಾಗಗಳು ಪ್ರವಾಹಕ್ಕೆ ಒಳಗಾಗಿವೆ. ರಸ್ತೆಗಳಲ್ಲಿ 5ರಿಂದ 6 ಅಡಿ ನೀರು ಹರಿಯುತ್ತಿದೆ. ಜನರು ಮನೆಯಿಂದ ಹೊರಗೆ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳ‌ ಮುಂದೆ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಕಾರುಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಈ‌ ಮಧ್ಯೆ, ಪ್ರವಾಹದಲ್ಲಿ ತೇಲಿಬಂದ ಮೊಸಳೆಯೊಂದು ಚೆನ್ನೈನ ಪೆರುಂಗಲತ್ತೂರ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೊಸಳೆ ವಿಡಿಯೋ ವೈರಲ್ ಆಗಿದ್ದು, ನಾಗರಿಕರ ಆತಂಕ ಹೆಚ್ಚಿಸಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here