1 ಎಕರೆ ಜಾಗಕ್ಕಾಗಿ ತಾಯಿಯ ರುಂಡ ಕತ್ತರಿಸಿದ ಪಾಪಿ ಪುತ್ರ-ಕೈಯಲ್ಲಿ ರುಂಡ ಹಿಡಿದು ಸ್ಥಳದಿಂದ ಪರಾರಿ-ಪೊಲೀಸರ ಕಾರ್ಯಾಚರಣೆ ವೇಳೆ ಗದ್ದೆಯಲ್ಲಿ ರುಂಡದೊಂದಿಗೆ ಕುಳಿತಿದ್ದ ಆರೋಪಿ ವಶಕ್ಕೆ 

ಮಂಗಳೂರು(ಉತ್ತರ ಪ್ರದೇಶ): ಒಂದು ಎಕರೆ ಜಾಗಕ್ಕಾಗಿ ಹೆತ್ತ ತಾಯಿಯ ರುಂಡವನ್ನು ಕಡಿದ ಮಗ ಬಳಿಕ ಆಕೆಯ ತಲೆಯನ್ನು ತೆಗೆದುಕೊಂಡು ಹೋಗಿರುವ ಭೀಬತ್ಸ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆರೋಪಿ ದಿನೇಶ್ ಪಾಸಿ ಎಂಬಾತನ ತಾಯಿ ಕಮಲಾದೇವಿ ಹೆಸರಿನಲ್ಲಿ 3 ಎಕರೆ ಜಮೀನು ಇತ್ತು. ಕಮಲಾ ಅವರ ಪುತ್ರ ದಿನೇಶ್ ಈ ಭೂಮಿಯನ್ನು ತಮ್ಮ ಹೆಸರಿಗೆ ಪಡೆಯಲು ಬಯಸಿದ್ದರು. 3 ಎಕರೆ ಜಾಗದ ಪೈಕಿ 1 ಎಕರೆ ಭೂಮಿಯನ್ನು ತನ್ನ ಹೆಸರಿಗೆ ಮಾಡುವಂತೆ ತಾಯಿಯ ಬಳಿ ದಿನೇಶ್‌ ಬೇಡಿಕೆ ಇಟ್ಟಿದ್ದ. ಆದರೆ, ಇದಕ್ಕೆ ಕಮಲಾ ದೇವಿ ವಿರೋಧ ವ್ಯಕ್ತಪಡಿಸಿದ್ದರಿಂದ ಆತ ಕೋಪಗೊಂಡು ತಾಯಿಯ ರುಂಡವನ್ನೇ ಕತ್ತರಿಸಿದ್ದಾನೆ. ಮಾತ್ರವಲ್ಲ ರುಂಡದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನು ಕಂಡು ಗಾಬರಿಗೊಂಡಿದ್ದ ಗ್ರಾಮಸ್ಥರು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಸಂಪೂರ್ಣ ಮಾಹಿತಿ ಪಡೆದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿ ದಿನೇಶ್ ಗದ್ದೆಯಲ್ಲಿ ತಾಯಿಯ ರುಂಡದೊಂದಿಗೆ ತಲೆತಗ್ಗಿಸಿ ಕುಳಿತುಕೊಂಡಿದ್ದು ಪೊಲೀಸರು ಆತನನ್ನು ವಶಕ್ಕೆ ಪಡದಿದ್ದಾರೆ.

 

 

LEAVE A REPLY

Please enter your comment!
Please enter your name here