ಡ್ರಗ್ ಪೆಡ್ಲರ್ ಅಶ್ವಿತ್ ಸೆರೆ-7.77 ಲಕ್ಷ ರೂ. ಮೌಲ್ಯದ ಸೊತ್ತು ವಶ

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡಿದ್ದ ಆರೋಪದ ಮೇರೆಗೆ ಡ್ರಗ್ ಪೆಡ್ಲರ್ ಆಶಿತ್ ಯಾನೆ ಅಶ್ವಿತ್ ಯಾನೆ ಆಶು ಎಂಬಾತನನ್ನು ಡ್ರಗ್ ತಡೆ ತಂಡವು ಡಿ.11ರಂದು ಬಂಧಿಸಿದೆ.

ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಸಂತೋಷ ನಗರದ ಸಾರ್ವಜನಿಕ ರಸ್ತೆಯ ಬದಿ ಸುಮಾರು 132 ಗ್ರಾಂ ತೂಕದ ಎಂಡಿಎಂಎ ಮತ್ತು 250 ಎಲ್‌ ಎಸ್‌ ಡಿ ಡ್ರಗ್ಗನ್ನು ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿಶಿರ್ ದೇವಾಡಿಗ ಮತ್ತು ಶುಶಾನ್ ಎಲ್. ಎಂಬವರನ್ನು ಡಿ.4ರಂದು ಮಂಗಳೂರು ದಕ್ಷಿಣ ಉಪವಿಭಾಗದ ಉಪಾಯುಕ್ತೆ ಧನ್ಯಾ ವಿ. ನಾಯಕ್ ನೇತೃತ್ವದ ತಂಡವು ಬಂಧಿಸಿತ್ತು. ಈ ಆರೋಪಿಗಳಿಗೆ ಮಾದಕ ವಸ್ತುವನ್ನು ನೀಡಿರುವ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಡ್ರಗ್ ಪೆಡ್ಲರ್ ಆಶಿತ್ ಯಾನೆ ಅಶ್ವಿತ್ ಯಾನೆ ಆಶು ಎಂಬಾತನನ್ನು ಕೋಟೆಕಾರು ಗ್ರಾಮದ ಮಾಡೂರು ಸಾಯಿ ಮಂದಿರದ ಸಮೀಪದ ಗ್ರೌಂಡ್ ಬಳಿ ಬಂಧಿಸಿದ್ದಾರೆ.

ಆರೋಪಿಯಿಂದ ಸುಮಾರು 100 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಎಂಡಿಎಂಎ, ಸುಮಾರು 600 ಗ್ರಾಂ ತೂಕದ 30 ಲಕ್ಷ ರೂ. ಮೌಲ್ಯದ ಗಾಂಜ, 1 ಲಕ್ಷ ರೂ.ಮೌಲ್ಯದ ದ್ವಿಚಕ್ರ ವಾಹನ ಸಹಿತ 7.77 ಲಕ್ಷ ರೂ. ಮೌಲ್ಯದ ಸೊತ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣ ಹೆಚ್.ಎನ್, ಉಳ್ಳಾಲ ಠಾಣೆಯ ಎಸ್ಸೈ ಶೀತಲ್ ಅಲಗೂರ ಮತ್ತು ಸಂತೋಷ ಕುಮಾರ್ ಡಿ. ಮತ್ತು ಡ್ರಗ್ ತಡೆ ತಂಡದ ಎಸ್ಸೈ ಪುನಿತ್ ಗಾಂವ್ಕರ್,  ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್‌ಗಳಾದ ಸಾಜು ನಾಯರ್, ಮಹೇಶ್, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್, ಅಕ್ಬರ್ ಯಡ್ರಾಮಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here