ಡಿ.15ರಂದು ಡಾ.ಎಂ ವಿ ಶೆಟ್ಟಿ ಇನ್ಸ್ಟಿಟ್ಯೂಟ್‌ ಆಫ್‌ ಪ್ರೊಫೆಶನಲ್‌ ಸೈನ್ಸಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್ ಆಶ್ರಯದಲ್ಲಿ ಎಂಪವರಿಂಗ್‌ ಯಂಗ್‌ ಮೈಂಡ್ಸ್‌ ಫಾರ್‌ ಸಸ್ಟೈನೇಬಲ್‌ ಲಿವಿಂಗ್‌ ಎಂಬ ವಿಚಾರದಲ್ಲಿ ಕಾರ್ಯಾಗಾರ

ಮಂಗಳೂರು: ಡಾ.ಎಂ ವಿ ಶೆಟ್ಟಿ ಇನ್ಸ್ಟಿಟ್ಯೂಟ್‌ ಆಫ್‌ ಪ್ರೊಫೆಶನಲ್‌ ಸೈನ್ಸಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್ ವಿದ್ಯಾನಗರ್‌ ಮಂಗಳೂರು ಇದರ ಆಶ್ರಯದಲ್ಲಿ ಎಂಪವರಿಂಗ್‌ ಯಂಗ್‌ ಮೈಂಡ್ಸ್‌ ಫಾರ್‌ ಸಸ್ಟೈನೇಬಲ್‌ ಲಿವಿಂಗ್‌ ಎಂಬ ವಿಚಾರದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.

ಡಿ.15ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಸಾಹಸ್‌ ಸಂಸ್ಥೆಯ ಪ್ರಾಜೆಕ್ಟ್‌ ಕಾರ್ಡಿನೇಟರ್‌ ಕಾರ್ತಿಕ್‌ ಜಕ್ಕಣ್ಣನವರ್‌ ಭಾಗವಹಿಸಲಿದ್ದು ಡಾ.ಎಂ ವಿ ಶೆಟ್ಟಿ ಮೆಮೋರಿಯಲ್‌ ಟ್ರಸ್ಟ್‌ ಮಂಗಳೂರು ಇದರ ಟ್ರಸ್ಟಿ ದಿವ್ಯಾಂಜಲಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ನಡೆಯುವ ಕಾರ್ಯಾಗಾರದಲ್ಲಿ ಕಾರ್ತಿಕ್‌ ಜಕ್ಕಣ್ಣನವರ್‌ ಕೊಂಬಾಟಿಂಗ್‌ ಎನ್ವಿರಾನ್ಮೆಂಟಲ್‌ ಪ್ರಾಬ್ಲಮ್ಸ್‌ ಥ್ರೂ ಯೂತ್‌ ಆ್ಯಕ್ಷನ್‌ ಎಂಬ ವಿಚಾರದಲ್ಲಿ ಮಾತನಾಡಲಿದ್ದು 11.30 ರಿಂದ ನಡೆಯುವ ಕಾರ್ಯಾಗಾರದಲ್ಲಿ ಬೆಂಗಳೂರಿನ ಪೇಪರ್‌ ಸೀಡ್‌ ಸಂಸ್ಥೆಯ ಸ್ಥಾಪಕ ನಿತಿನ್ ವಾಸ್‌ ಇ‌ನ್ನೋವೇಶನ್ ಫಾರ್‌ ಎನ್ವಿರಾನ್ಮೆಂಟಲ್‌ ಕಾನ್ಸರ್ವೇಶನ್‌ ಎಂಬ ವಿಚಾರದಲ್ಲಿ ಮಾತನಾಡಲಿದ್ದಾರೆ.

LEAVE A REPLY

Please enter your comment!
Please enter your name here