ಲಂಡನ್ ನಲ್ಲಿ 1444 ಕೋಟಿ ರೂಪಾಯಿಯ ಐಷಾರಾಮಿ ಮನೆ – ಖರೀದಿ ಮಾಡಿದ ಕೋವಿಡ್ ಲಸಿಕೆ ನಿರ್ಮಾತೃ ಭಾರತದ ಆದರ್ ಪೂನವಾಲಾ

ಮಂಗಳೂರು(ನವದೆಹಲಿ): ಕೋವಿಶೀಲ್ಡ್ ಲಸಿಕೆ ತಯಾರಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ 42 ವರ್ಷದ ಭಾರತೀಯ ಉದ್ಯಮಿ ಅದರ್ ಪೂನಾವಾಲಾ ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಮನೆಯೊಂದನ್ನು ಖರೀದಿಸಲು ಮುಂದಾಗಿದ್ದಾರೆ.

ಲಂಡನ್ ನ ಅತ್ಯಂತ ದುಬಾರಿ ಐಷಾರಾಮಿ ಮನೆಯನ್ನು ರೂ.1444 ಕೋಟಿ ರೂಪಾಯಿಗೆ ಪೂನಾವಾಲಾ ಖರೀದಿಸಲಿದ್ದಾರೆ. 25,000 ಚದರ ಅಡಿಯ ಈ ಮಹಲಿನ ಒಪ್ಪಂದವನ್ನು 13 ಕೋಟಿ ಪೌಂಡ್‌ಗೆ ಮಾಡಿಕೊಂಡಿದ್ದಾರೆ. ಪೊಲೆಂಡಿನ ದಿವಂಗತ ಉದ್ಯಮಿ ಜಾನ್ ಕುಲ್ಸ್‌ಜಿಕ್ ಅವರ ಮಗಳು ಡೊಮಿನಿಕಾ ಕುಲ್‌ಜಿಕ್ ಅವರೊಂದಿಗೆ ಮನೆ ಖರೀದಿ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಬರ್ಕಾನ್‌ವೇ ಹೌಸ್  ಎಂಬ ಹೆಸರಿನ 1920ರ ದಶಕದಲ್ಲಿ ನಿರ್ಮಾಣ ಮಾಡಲಾದ ಅರಮನೆ ಇದಾಗಿದ್ದು,  ಬ್ರಿಟನ್‌ಗೆ ತೆರಳಿದ ಸಂದರ್ಭದಲ್ಲಿ ಅದರ್ ಅವರ ಕುಟುಂಬ ಹಾಗೂ ಕಂಪನಿಯ ಅಧಿಕಾರಿಗಳು ಇದನ್ನು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹೈಡ್ ಪಾರ್ಕ್ ಬಳಿಯ ಬೆಲೆಬಾಳುವ ಮೇಫೇರ್ ಪ್ರದೇಶದಲ್ಲಿರುವ ಈ ಆಸ್ತಿಯನ್ನು ಪೂನಾವಾಲಾ ಕುಟುಂಬ ನಡೆಸುವ ಎಸ್‌ಐಐ ಕಂಪನಿಯ ಬ್ರಿಟನ್ ಅಂಗಸಂಸ್ಥೆಯಾದ ಸೀರಮ್ ಲೈಫ್ ಸೈನ್ಸಸ್ ಸ್ವಾಧೀನವಾಗಲಿದೆ.  2020ರಲ್ಲಿ 21 ಕೋಟಿ ಪೌಂಡ್‌ಗೆ ಮಾರಾಟ ಮಾಡಲಾದ 2-8a ರಟ್‌ಲ್ಯಾಂಡ್ ನಿವಾಸದ ನಂತರ ಮಾರಾಟಗೊಳ್ಳುತ್ತಿರುವ ವಿಶ್ವದ ಎರಡನೇ ಅತಿ ದುಬಾರಿ ಮನೆ ಇದಾಗಿದೆ.

LEAVE A REPLY

Please enter your comment!
Please enter your name here