ಮಂಗಳೂರು(ಬೆಂಗಳೂರು): ಉದ್ಯಮಿಯೊಬ್ಬನನ್ನು ಹನಿಟ್ರ್ಯಾಪ್ಗೆ ಕೆಡವಲು ಪತಿ ತನ್ನ ಪತ್ನಿಯನ್ನೇ ಬಳಸಿಕೊಂಡು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಘಟನೆ ರಾಜ್ಯ ರಾಜದಾನಿ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ ಸಹಿತ ಒಟ್ಟು ಐವರ ತಂಡ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡುತ್ತಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದು ಕಂಬಿ ಎಣಿಸುವಂತಾಗಿದೆ.
ಖಲೀಮ್, ಸಭಾ, ಓಬೆದ್, ರಕೀಮ್, ಅತೀಕ್ ಬಂಧಿತರು. ಈ ಪೈಕಿ ಖಲೀಮ್ ಹಾಗೂ ಸಬಾ ದಂಪತಿಗಳು. ಇತರ ಮೂವರು ಇವರ ಸಹಚರರು. ಖಲೀಮ್ ಹನಿಟ್ರ್ಯಾಪ್ ಮಾಡುವುದರಲ್ಲಿ ಪಳಗಿದ ವ್ಯಕ್ತಿಯಾಗಿದ್ದ. ತನ್ನ ಕುಕೃತ್ಯಕ್ಕೆ ದಾಳವಾಗಿ ಪತ್ನಿಯನ್ನೇ ಬಳಸುತ್ತಿದ್ದ ಈತ ಇಲ್ಲಿಯೂ ಹಾಗೇ ಮಾಡಿದ್ದಾನೆ. ಪ್ರಕರಣದ ದೂರುದಾರ ಅತೀವುಲ್ಲಾ ಉದ್ಯಮಿಯಾಗಿದ್ದು ಈತನಿಂದ ಹನಿಟ್ರ್ಯಾಪ್ ಗೆ ಒಳಗಾಗಿದ್ದಾನೆ. ಅತೀವುಲ್ಲಾ ಬಳಿ ಬಹಳಷ್ಟು ದುಡ್ಡು ಇರಬಹುದೆಂದು ಶಂಕಿಸಿದ್ದ ಖಲೀಮ್ ಆತನಿಗೆ ಪತ್ನಿ ಸಭಾಳನ್ನು ಪರಿಚಯಿಸಿದ್ದ. ಆಕೆ ವಿಧವೆಯಾಗಿದ್ದು ನಿನ್ನ ಜತೆಗಿರಲಿ ಎಂದು ಅತೀವುಲ್ಲಾಗೆ ಸಲಹೆಯನ್ನೂ ಕೊಟ್ಟಿದ್ದ.
ಈ ವಿಚಾರದಲ್ಲಿ ಜಾಣೆಯಾಗಿದ್ದ ಸಭಾ ಅತಾವುಲ್ಲಾನೊಂದಿಗೆ ದೈಹಿಕ ಸಂಪರ್ಕ ಬೆಳೆಸುವ ಮೂಲಕ ಸುಲಭದಲ್ಲಿ ಆತನನ್ನು ಬಲೆಗೆ ಕೆಡವಿದ್ದಾಳೆ. ಅತಾವುಲ್ಲಾ ತನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಾನೆಂದು ಖಚಿತವಾಗುತ್ತಲೇ ಹನಿಟ್ರ್ಯಾಪ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾಳೆ. ಯೋಜನೆಯಂತೆ ಸಭಾ ಆರ್ಆರ್ ನಗರದಲ್ಲಿ ರೂಮ್ ಬುಕ್ ಮಾಡಿ ಉದ್ಯಮಿಯನ್ನು ಕರೆದಿದ್ದಳು. ಇತ್ತ ಖುಷಿ ಖುಷಿಯಾಗಿ ಅತೀವುಲ್ಲಾ ರೂಮ್ಗೆ ಬಂದ ಕೆಲ ಹೊತ್ತಲ್ಲೇ ಇತರೆ ಆರೋಪಿಗಳು ರೂಮಿಗೆ ನುಗ್ಗಿದ್ದಾರೆ. ಏಕಾಏಕಿ ಎಂಟ್ರಿ ಕೊಟ್ಟು ಸೀನ್ ಕ್ರಿಯೇಟ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಆರು ಲಕ್ಷ ಹಣ ಕೊಡು, ಇಲ್ಲದಿದ್ದರೆ ಮನೆಯವರಿಗೆ ಹೇಳಿ, ನಿನ್ನ ಫೋಟೊ- ವಿಡಿಯೋವನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇತ್ತ ಹಣ ಕೊಡುವುದಾಗಿ ಹೇಳಿ ಉದ್ಯಮಿ ಅತೀವುಲ್ಲಾ ಕೂಡಲೇ ಪೊಲೀಸರಿಗೆ ಕಾಲ್ ಮಾಡಿದ್ದಾನೆ. ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.