ಮಂಗಳೂರು(ನವದೆಹಲಿ): ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಆಂಟಿ-ಕೋಲ್ಡ್ ಡ್ರಗ್ ಕಾಂಬಿನೇಶನ್ (ಶೀತ ನಿವಾರಕ ಮಿಶ್ರಣ ಡ್ರಗ್)ಔಷಧ ಬಳಕೆಯನ್ನು ನಿಷೇಧಿಸಿ ಭಾರತದ ಡ್ರಗ್ಸ್ ನಿಯಂತ್ರಣ ಸಂಸ್ಥೆ ಆದೇಶ ಹೊರಡಿಸಿದೆ. ಕೆಮ್ಮಿನ ಸಿರಪ್‌ಗಳಿಂದ ಜಾಗತಿಕವಾಗಿ ಕನಿಷ್ಠ 141 ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಗನುಗುಣವಾಗಿ ಔಷಧಿಗಳನ್ನು ಲೇಬಲ್ ಮಾಡಬೇಕು, ಕಡ್ಡಾಯವಾಗಿ ‘ಎಚ್ಚರಿಕೆ’ಯ ಲೇಬಲ್ ಲಗತ್ತಿಸುವಂತೆ ಸೂಚಿಸಿದೆ.
ಭಾರತದಲ್ಲಿ, 2019 ರಲ್ಲಿ ದೇಶೀಯವಾಗಿ ತಯಾರಿಸಿದ ಕೆಮ್ಮಿನ ಸಿರಪ್‌ಗಳನ್ನು ಸೇವಿಸಿದ ನಂತರ ಕನಿಷ್ಠ 12 ಮಕ್ಕಳು ಸಾವನ್ನಪ್ಪಿದ್ದು, ನಾಲ್ವರು ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಈ ಪೈಕಿ ಗಾಂಬಿಯಾ, ಉಜ್ಬೇಕಿಸ್ತಾನ ಹಾಗೂ ಕ್ಯಾಮರೂನ್ ದೇಶಗಳಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿತ್ತು. ಭಾರತದಲ್ಲೂ 12 ಮಕ್ಕಳು ಮೃತಪಟ್ಟಿದ್ದರು. ಇದರಿಂದಾಗಿ ಭಾರತದಿಂದ ರಫ್ತು ಆಗುತ್ತಿರುವ ಔಷಧಿ ಗುಣಮಟ್ಟದ ಮೇಲೆ ಶಂಕೆ ಉಂಟಾಗಿತ್ತು.