ನೀಲಗಿರಿ ಲೈಬ್ರರಿಯಿಂದ 116 ವರ್ಷ ಹಿಂದಿನ ಪುರಾತನ ಪುಸ್ತಕ ಕದ್ದ ಬೆಂಗಳೂರಿನ ವ್ಯಕ್ತಿ ಬಂಧನ-ತನಿಖೆ ವೇಳೆ ಇನ್ನಷ್ಟು ಸ್ಫೋಟಕ ಮಾಹಿತಿ ಬಯಲು

ಮಂಗಳೂರು(ಊಟಿ): ಊಟಿಯಲ್ಲಿರುವ 160 ವರ್ಷಗಳ ಹಿಂದಿನ ನೀಲಗಿರಿ ಲೈಬ್ರರಿ, ಭಾರತದ ಅತ್ಯಂತ ಹಳೇ ಗ್ರಂಥಾಲಯವಾಗಿದ್ದು, ಈ ಗ್ರಂಥಾಲಯದಿಂದ 116 ವರ್ಷ ಹಳೆಯದಾದ ಮಹತ್ವದ ಪುಸ್ತಕವೊಂದು ಕಳುವಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಂಗಳೂರಿನ ಕೋರಮಂಗಲ ನಿವಾಸಿ ಕಾತಿಟ್ರ ದೇಬನಾಥ್ ಎಂದು ಗುರುತಿಸಲಾಗಿದೆ.

ಅಕ್ಟೋಬರ್ ತಿಂಗಳಲ್ಲಿ ನೀಲಗಿರಿ ಲೈಬ್ರರಿ ಸಹಯೋಗದಲ್ಲಿ ಊಟಿ ಲಿಟರೇಚರ್ ಫೆಸ್ಟ್ ಆಯೋಜಿಸಿತ್ತು. ಇಲ್ಲಿ ನೀಲಗಿರಿ ಲೈಬ್ರರಿಯ ಕೆಲ ವಿಶೇಷ ಹಾಗೂ ಅತ್ಯಮೂಲ್ಯ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಾಹಿತ್ಯ ಉತ್ಸವ ಮುಗಿದ ಬಳಿಕ ಎಲ್ಲಾ ಪುಸ್ತಕಗಳನ್ನು ಲೈಬ್ರರಿಯಲ್ಲಿ ಜೋಡಿಸಲಾಗಿತ್ತು. ಈ ವೇಳೆ 116 ವರ್ಷಗಳ ಹಿಂದೆ ಮುದ್ರಣಗೊಂಡಿರುವ “ಪೈರೇಟ್ಸ್ ಆಫ್ ಮಲಬಾರ್ ಆ್ಯಂಡ್ ಇಂಗ್ಲೀಷ್ ವುವೆನ್ ಇನ್ ಇಂಡಿಯಾ 200 ಇಯರ್ಸ್ ಎಗೋ” (ಮಲಬಾರ್ ಕಡಲ್ಗಳ್ಳರು ಮತ್ತು 200 ವರ್ಷಗಳ ಹಿಂದೆ ಭಾರತದಲ್ಲಿ ಇಂಗ್ಲಿಷ್ ಮಹಿಳೆಯರು) ಈ ಪುಸ್ತಕ ಕಾಣೆಯಾಗಿತ್ತು. ಈ ಪುಸ್ತಕ ಕಾಣೆಯಾಗಿರುವುದು ನೀಲಗಿರಿ ಲೈಬ್ರರಿ ಸಿಬ್ಬಂದಿಗಳ ನಿದ್ದೆಗೆಡಿಸಿತ್ತು. ಸಂಪೂರ್ಣ ಲೈಬ್ರರಿ ಹುಡುಕಿದರೂ ಪುಸ್ತಕದ ಸುಳಿವಿರಲಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿ ತನಿಖೆ ವೇಳೆ ಇದೇ ಹೆಸರಿನ ಪುಸ್ತಕವೊಂದು ಇನ್‌ಸ್ಟಾಗ್ರಾಂ ಮೂಲಕ ಮಾರಾಟಕ್ಕಿಟ್ಟಿರುವ ಮಾಹಿತಿ ಲಭ್ಯವಾಗಿದೆ.

ಮೊಬೈಲ್ ನಂಬರ್ ಟ್ರೇಸ್ ಮಾಡುವ ಮೂಲಕ ಪುಸ್ತಕ ಕಳ್ಳ ಬೆಂಗಳೂರಿನ ಕೋರಮಂಗಲದಲ್ಲಿರುವುದು ಪತ್ತೆಯಾಗಿದೆ. ಊಟಿಯಿಂದ ಬೆಂಗಳೂರಿಗೆ ಆಗಮಿಸಿದ ಪೊಲೀಸರು 34 ವರ್ಷದ ದೇಬನಾಥ್ ನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲಾಗಿದೆ. ಈತ ದೇಶದ ವಿವಿದ ಲೈಬ್ರರಿ, ಸಾಹಿತ್ಯ ಉತ್ಸವದಲ್ಲಿ ಅತ್ಯಂತ ಹಳೇ ಪುಸ್ತಕ, ಗ್ರಂಥಗಳನ್ನು ಕದ್ದು, ಬಳಿಕ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.

 

LEAVE A REPLY

Please enter your comment!
Please enter your name here