ಮಂಗಳೂರಿನಲ್ಲಿ ತೇಲುವ ಸೇತುವೆ-ಪಣಂಬೂರು ಬೀಚ್‌ ನಲ್ಲಿ ತೇಲುವ ಸೇತುವೆ ಅಳವಡಿಕೆ- ಬೃಹತ್ ಅಲೆಗಳ ನಡುವೆ ಸೇತುವೆ ಮೇಲೆ ನಡೆದಾಡಿ ಸಂಭ್ರಮಿಸಿದ ಪ್ರವಾಸಿಗರು

ಮಂಗಳೂರು(ಪಣಂಬೂರು): ಮಲ್ಪೆ ಬೀಚ್‌ ಬಳಿಕ ಇದೀಗ ದ.ಕ.ದ ಪಣಂಬೂರು ಬೀಚ್‌ನಲ್ಲಿ ಮೊದಲ ಬಾರಿಗೆ ತೇಲುವ ಸೇತುವೆಯನ್ನು ಅಳವಡಿಸಲಾಗಿದ್ದು ವಿಧಾನಸಭಾ ಸ್ಪೀಕರ್‌ ಯು.ಟಿ ಖಾದರ್‌ ಡಿ.27 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಸಭಾಧ್ಯಕ್ಷರು ಬೀಚ್‌ ಪ್ರವಾಸೋದ್ಯಮಕ್ಕೆ ಸರಕಾರವು ಎಲ್ಲಾ ರೀತಿಯ ಸಹಕಾರ ನೀಡುವ ಬಗ್ಗೆ ಪ್ರವಾಸೋದ್ಯಮ ಸಚಿವರಲ್ಲಿ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು. ಬೀಚ್‌ ನಿರ್ವಹಣಾ ಸಂಸ್ಥೆಯ ಪಾಲುದಾರರಾದ ಲಕ್ಷ್ಮೀಶ ಭಂಡಾರಿ, ರಾಜೇಶ್‌ ಹುಕ್ಕೇರಿ ಉಪಸ್ಥಿತರಿದ್ದರು.  ಸುಮಾರು 150 ಮೀಟರ್‌ ಉದ್ದವಿದ್ದು 50ಕ್ಕೂ ಮಿಕ್ಕಿ ಪ್ರವಾಸಿಗರು ಏಕಕಾಲದಲ್ಲಿ ಸೇತುವೆಯ ತುದಿಯಲ್ಲಿ ನಿಂತು ಸೂರ್ಯಾಸ್ತಮಾನ ನೋಡಬಹುದಾಗಿದೆ. 150 ಮೀಟರ್ ಉದ್ದದ ತೇಲುವ ಸೇತುವೆ ವಿಹಾರಕ್ಕೆ 150 ರೂ ಪಾವತಿಸಬೇಕು. ಲೈಫ್‌ ಜಾಕೆಟ್‌ ಕಡ್ಡಾಯ ಮಾಡಲಾಗಿದ್ದು, ತೇಲುವ ಸೇತುವೆಯ ಉದ್ದಕ್ಕೂ 12 ಮಂದಿ ಲೈಫ್‌ ಗಾರ್ಡ್ಸ್ ಗಳನ್ನು ಪ್ರವಾಸಿಗರ ಸುರಕ್ಷತೆಗಾಗಿ ನೇಮಿಸಲಾಗಿದೆ.

LEAVE A REPLY

Please enter your comment!
Please enter your name here