11 ವರ್ಷಗಳ ಹಿಂದೆ ಸೌದಿ ಪ್ರಜೆಯ ಕೊಲೆ – ಮಂಗಳೂರು ಮೂಲದ ವ್ಯಕ್ತಿಗೆ ಸೌದಿಯಲ್ಲಿ ಮರಣ ದಂಡನೆ

ಮಂಗಳೂರು (ರಿಯಾದ್): ಕೊಲೆ ಪ್ರಕರಣದಲ್ಲಿ ಸೌದಿ ಜೈಲಿನಲ್ಲಿದ್ದ ಭಾರತೀಯ ವ್ಯಕ್ತಿಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಕರ್ನಾಟಕದ ಮಂಗಳೂರು ಮೂಲದ ಸಮದ್ ಸ್ವಾಲಿಹ್ ಹಸನ್ ಎಂಬವರ ಮರಣದಂಡನೆ ಜಾರಿಗೊಳಿಸಲಾಗಿದೆ ಎಂದು ದಮ್ಮಾಮ್ ಜೈಲು ಅಧಿಕಾರಿಗಳು ಘೋಷಿಸಿದ್ದಾರೆ.

11 ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಸಮದ್ ನನ್ನು ಬಂಧಿಸಲಾಗಿತ್ತು. ಡಿ.29ರಂದು ಬೆಳಗ್ಗೆ ಮರಣದಂಡನೆ ವಿಧಿಸಲಾಗಿದೆ.

ಮನೆ ಚಾಲಕನಾಗಿ ಸೌದಿ ಅರೇಬಿಯಾದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಸಮದ್, 11 ವರ್ಷಗಳ ಹಿಂದೆ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುವ ವೇಳೆ ತಡೆಯಲು ಬಂದಿದ್ದ ಸೌದಿ ಪೂರ್ವ ಪ್ರಾಂತ್ಯದ ಅಲಿ ಬಿನ್ ತ್ರಾದ್ ಅಲ್-ಅನಾಸಿ ಎಂಬ ಸೌದಿ ಪ್ರಜೆಯನ್ನು ಬಟ್ಟೆಯಿಂದ ಕಟ್ಟಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಬಳಿಕ ಪೊಲೀಸರು ಸಮದ್‌ನನ್ನು ಬಂಧಿಸಿ,ವಿಚಾರಣೆ ವೇಳೆ ಸಮದ್ ತಪ್ಪೊಪ್ಪಿಕೊಂಡಿದ್ದ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸೌದಿ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ವಿಧಿಸಿತ್ತು. ಕೊಲ್ಲಲ್ಪಟ್ಟ ವ್ಯಕ್ತಿಯ ಸಂಬಂಧಿಕರು ಕ್ಷಮಾಪಣೆಗೆ ಸಿದ್ಧರಿಲ್ಲದ ಕಾರಣ ಅಂತಿಮವಾಗಿ ಡಿ.29ರಂದು ಮರಣದಂಡನೆಯನ್ನು ಜಾರಿಗೊಳಿಸಲಾಗಿದೆ.

LEAVE A REPLY

Please enter your comment!
Please enter your name here