ಮಂಗಳೂರು(ರಿಯಾದ್): ಮೆಕ್ಕಾ ಪ್ರಾಂತ್ಯದಲ್ಲಿನ ಅಲ್ ಖುರ್ಮಾ ಒಡೆತನದ ಮನ್ಸೌರಾ ಮಸಾರಾ ಚಿನ್ನದ ನಿಕ್ಷೇಪವಿರುವ 100 ಕಿಮೀ ಉದ್ದದಲ್ಲಿ ಭಾರಿ ಪ್ರಮಾಣದ ಚಿನ್ನದ ಸಂಪನ್ಮೂಲಗಳು ಪತ್ತೆಯಾಗಿವೆ ಎಂದು ಸೌದಿ ಅರೇಬಿಯಾ ಪ್ರಕಟಿಸಿದೆ.
ತಾನು ಹಲವಾರು ಭಾರಿ ಪ್ರಮಾಣದ ಚಿನ್ನದ ನಿಕ್ಷೇಪಗಳನ್ನು ಪತ್ತೆ ಹಚ್ಚಿದ್ದು, ಈ ಪ್ರಾಂತ್ಯದಲ್ಲಿ ಮತ್ತಷ್ಟು ಚಿನ್ನದ ಗಣಿಗಾರಿಕೆ ನಡೆಸಬಹುದು ಎಂಬುದನ್ನು ಸೂಚಿಸುತ್ತಿದೆ ಎಂದು ಸೌದಿ ಅರೇಬಿಯಾ ಗಣಿಗಾರಿಕೆ ಕಂಪನಿ ಮಾಡೆನ್ ಹೇಳಿದೆ. 2022ರಲ್ಲಿ ತಾನು ಭಾರಿ ಪ್ರಮಾಣದ ಶೋಧನಾ ಕಾರ್ಯವನ್ನು ಕೈಗೆತ್ತಿಕೊಂಡ ನಂತರ ಇದೇ ಪ್ರಥಮ ಬಾರಿಗೆ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಗಣಿಗಾರಿಕೆಯ ದೈತ್ಯ ಸಂಸ್ಥೆಯು ಹೇಳಿಕೊಂಡಿದ್ದು, ಈ ಭಾಗದಲ್ಲಿ ಲೋಹ ಉತ್ಪಾದನಾ ಘಟಕವನ್ನು ನಿರ್ಮಿಸಲು ಉದ್ದೇಶಿಸಿದ್ದೇನೆ ಎಂದು ಪ್ರಕಟಿಸಿದೆ.
ಮನ್ಸೌರಾ ಮಸಾರಾದ 100 ಕಿಮೀ ಉದ್ದಕ್ಕಿರುವ ಉರುಕ್ ದಕ್ಷಿಣದಲ್ಲಿ ಹಲವಾರು ಚಿನ್ನದ ನಿಕ್ಷೇಪಗಳು ಪತ್ತೆಯಾಗಿರುವುದು ಗಣಿಗಾರಿಕೆಗೆ ಉತ್ತೇಜನ ನೀಡಿದೆ. ಇಲ್ಲಿನ ಗಣಿ ನಿಕ್ಷೇಪದ ಭೌಗೋಳಿಕತೆಯು ಮನ್ಸೌರಾ ಮಸಾರಾ ಚಿನ್ನದ ನಿಕ್ಷೇಪದಂತೆಯೇ ಇದೆ ಎಂದೂ ತಿಳಿದು ಬಂದಿದೆ. ಮನ್ಸೌರಾ ಮಸಾರಾದ 400 ಮೀಟರ್ ಅಡಿಯಲ್ಲಿ ನಡೆಸಲಾಗಿರುವ ಗಣಿಗಾರಿಕೆಯಲ್ಲಿ ಹೊರ ತೆಗೆಯಲಾಗಿರುವ ಮಾದರಿಯಲ್ಲಿ 10.4 ಗ್ರಾಂ/ಮೆ.ಟನ್ ಹಾಗೂ 20.6 ಗ್ರಾಂ/ಮೆ.ಟನ್ ನ ಉನ್ನತ ಗುಣ ಮಟ್ಟದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದರರ್ಥ, ಈ ಪ್ರದೇಶಗಳಲ್ಲಿ ಪತ್ತೆ ಮಾಡಲಾಗಿರುವ ಅದಿರಿನಲ್ಲಿ ಭಾರಿ ಪ್ರಮಾಣದ ಚಿನ್ನ ಇರುವುದು ಕಂಡು ಬಂದಿದೆ. ಈ ಫಲಿತಾಂಶಗಳ ಹಿನ್ನೆಲೆಯಲ್ಲಿ, ಮನ್ಸೌರಾ ಮಸಾರಾದ ಸುತ್ತಮುತ್ತ 2024ರಲ್ಲಿ ಆಕ್ರಮಣಕಾರಿ ಗಣಿಗಾರಿಕೆ ಚಟುವಟಿಕೆಗಳನ್ನು ನಡೆಸಲು ಮಾಡೆನ್ ಯೋಜಿಸಿದೆ.
ಮನ್ಸೌರಾ ಮಸಾರಾ ಉತ್ತರದಿಂದ 25 ಕಿಮೀ ದೂರವಿರುವ ಜಬಲ್ ಅಲ್-ಘಡಾರಾ ಹಾಗೂ ಬೀರ್ ಅಲ್-ತವಿಲಾ ಭೂಭಾಗದಲ್ಲಿ ಮಾಡೆನ್ ತನ್ನ ಶೋಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸುವುದನ್ನು ವಿಸ್ತರಿಸತೊಡಗಿದೆ. ಈ ಪ್ರದೇಶಗಳಿಂದ ಅಳತೆಗಾಗಿ 1.5 ದಶಲಕ್ಷ ಔನ್ಸ್ ನಷ್ಟು ಅಂದಾಜಿಸಲಾದ ಸಂಪನ್ಮೂಲಗಳನ್ನು ಸ್ಥಳಾಂತರಿಸಿದೆ. ಇದರೊಂದಿಗೆ, ಈ ಸಕಾರಾತ್ಮಕ ಗಣಿಗಾರಿಕೆ ಫಲಿತಾಂಶಗಳಿಂದ ವಿಶ್ವದ ಗಮನಾರ್ಹ ಜಾಗತಿಕ ದರ್ಜೆಯ ಭಾರಿ ಪ್ರಮಾಣದ ಚಿನ್ನದ ನಿಕ್ಷೇಪವನ್ನು ಹೊಂದಿರುವ ದೇಶವಾಗಿ ಸೌದಿ ಅರೇಬಿಯಾ ಹೊರಹೊಮ್ಮಲಿದೆ. ಮನ್ಸೌರಾ ಮಸಾರಾ ಗಣಿಯ ಬಳಿ ನಡೆದಿರುವ ಗಣಿಗಾರಿಕೆ ಫಲಿತಾಂಶಗಳು ಚಿನ್ನದ ಸಂಪನ್ಮೂಲಗಳು ಆಳ ಹಾಗೂ ಬದಿಯಲ್ಲಿ ಸಂಗ್ರಹಗೊಂಡಿದೆ. ಇದರಿಂದ ಗಣಿಯಲ್ಲಿ ಭಾರಿ ಪ್ರಮಾಣದ ಸಂಪನ್ಮೂಲಗಳನ್ನು ವಿಸ್ತರಿಸಬಹುದಾಗಿದೆ. ಗಮನಾರ್ಹವಾಗಿ, ಭೂತಳದ ಅಭಿವೃದ್ಧಿಯೊಂದಿಗೆ ಗಣಿಯ ಜೀವಿತಾವಧಿಯನ್ನು ವಿಸ್ತರಿಸಬಹುದಾಗಿದೆ ಎಂದು ಸೂಚಿಸುತ್ತಿವೆ. 2023ರ ಅಂತ್ಯದ ವೇಳೆಗೆ ತನ್ನ ಚಿನ್ನದ ಸಂಪನ್ಮೂಲಗಳು 7 ದಶಲಕ್ಷ ಔನ್ಸ್ ಆಗಿದ್ದು, ಪ್ರತಿ ವರ್ಷ 250,000 ಔನ್ಸ್ ಚಿನ್ನ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದೇನೆ ಎಂದು ಮನ್ಸೌರಾ ಮಸಾರಾ ಹೇಳಿದೆ.