ಮಂಗಳೂರು (ಉಡುಪಿ): ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದ ಭದ್ರತೆಗೆ ಸಹಾಯವಾಗುವ ನಿಟ್ಟಿನಲ್ಲಿ ಮಣಿಪಾಲದ ಎಂಐಟಿಯ ಉದ್ಯೋಗಿ, ಪರ್ಕಳದ ನಿವಾಸಿ ಆರ್.ಮನೋಹರ್ ದೂರದರ್ಶಕವೊಂದನ್ನು ಆವಿಷ್ಕಾರ ಮಾಡದ್ದಾರೆ.
ಮನೋಹರ್ ತಯಾರಿಸಿರುವ ಯುಎಸ್ ಪೇಟೆಂಟ್ ಪಡೆದಿರುವ 50 ಬೈನಾಕ್ಯುಲರ್‌ಗಳಿಗೆ ಅಯೋಧ್ಯೆ ರಾಮಮಂದಿರದ ಭದ್ರತಾ ವಿಭಾಗದಿಂದ ಬೇಡಿಕೆ ಬಂದಿದ್ದು, 25 ದೂರದರ್ಶಕಗಳನ್ನು ತಯಾರಿಸಿ ಅಯೋ ಧ್ಯೆಗೆ ಕಳುಹಿಸಿ ಕೊಡಲಾಗುವುದು ಎಂದು ಮನೋಹರ್ ತಿಳಿಸಿದ್ದಾರೆ.
ಮನೋಹರ್ ಆವಿಷ್ಕರಣೆ ಮಾಡಿರುವ ಈ ದೂರದರ್ಶಕಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪೇಟೆಂಟ್ ದೊರಕಿದೆ. ಶ್ರೀರಾಮ ಮಂದಿರದ ಭದ್ರತೆ ದೃಷ್ಟಿಯಲ್ಲಿ ಸರ್ಚಿಂಗ್ ನಡೆಸಲು ಮನೋಹರ್ ಅವರ ದೂರದರ್ಶಕ ಆಯ್ಕೆ ಆಗಿರುವುದು ಇಲ್ಲಿನ ಸ್ಥಳೀಯರಲ್ಲಿಯೂ ಸಂತಸ ತಂದಿದೆ.