ವೆಲ್ಡಿಂಗ್‌ ಮಾಡುತ್ತಿದ್ದ ವೇಳೆ ಖಾಲಿ ತೈಲ ಟ್ಯಾಂಕರ್‌ ಗೆ ಬೆಂಕಿ-ಕಾರ್ಮಿಕ ರೊನಾಲ್ಡ್‌ ಪೌಲ್‌ ಗೆ ಗಂಭೀರ ಗಾಯ – ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಖಾಸಗಿ ಪೆಟ್ರೋ ಕೆಮಿಕಲ್ ಕಂಪನಿಯೊಂದರಲ್ಲಿ ವೆಲ್ಡಿಂಗ್‌ ಮಾಡುತ್ತಿರುವ ಸಂದರ್ಭ ಅಗ್ನಿ ಅವಘಡ ಉಂಟಾಗಿ ಕಾರ್ಮಿಕ ರೊನಾಲ್ಡ್‌ ಪೌಲ್‌ ತೀವ್ರಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜ.13ರಂದು ನಡೆದಿದೆ.

ರೊನಾಲ್ಡ್ ಪಾಲ್ ಇತರ ಆರು ಕಾರ್ಮಿಕರೊಂದಿಗೆ ಖಾಲಿ ಇದ್ದ ತೈಲ ಟ್ಯಾಂಕ್‌ನಲ್ಲಿ ವೆಲ್ಡಿಂಗ್ ಕೆಲಸದಲ್ಲಿ ತೊಡಗಿದ್ದಾಗ, ರೊನಾಲ್ಡ್ ಪಾಲ್ ಟ್ಯಾಂಕ್ ಮೇಲೆ ನಿಂತಿದ್ದರು. ಅದೇ ಸಮಯದಲ್ಲಿ, ಇತರ ಕಾರ್ಮಿಕರು ನೆಲದ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪೌಲ್ ಟ್ಯಾಂಕ್‌ ಮೇಲೆ ಇದ್ದುದರಿಂದ ಒಮ್ಮೆಲೆ ಬೆಂಕಿ ಕೆನ್ನಾಲಿಗೆ ಆವರಿಸಿ ತೀವ್ರ ಸುಟ್ಟ ಗಾಯಕ್ಕೊಳಗಾಗಿ 20 ಅಡಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಜ.13ರಂದು ರಾತ್ರಿ ಮೃತಪಟ್ಟಿದ್ದಾರೆ. ಇತರ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here