ಮಂಗಳೂರು(ಚೆನ್ನೈ): ಪೊಂಗಲ್ ಗೆ ಸಂಬಂಧಪಟ್ಟಂತೆ ಜ.17ರಂದು ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅಪ್ರಾಪ್ತ ವಯಸ್ಸಿನ ಓರ್ವನ ಸಹಿತ ಇಬ್ಬರು ತಮಿಳುನಾಡಿನ ಶಿವಗಂಗ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. 70 ಮಂದಿಗೆ ಗಾಯವಾಗಿದೆ.
ಘಟನೆಯಲ್ಲಿ ವಳಯಂ ಪಟ್ಟಿ ರವಿ(11) ಮತ್ತು 35 ವರ್ಷದ ಯುವಕ ಮೃತಪಟ್ಟಿದ್ದಾರೆ. ಜಿಲ್ಲಾಧಿಕಾರಿ ಆಶಾ ಅಜಿತ್, ಸ್ಥಳೀಯ ಸಂಸದ ಕಾರ್ತಿ ಪಿ. ಚಿದಂಬರಂ, ಡಿಎಂಕೆಯ ಸಚಿವ ಪರೆಯ ಕುರುಪ್ಪನ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 271 ಹೋರಿಗಳು ಮತ್ತು 81 ಹೋರಿಯನ್ನು ಮಣಿಸುವ ವೀರರು ಭಾಗವಹಿಸಿದ್ದರು. ಇನ್ನೊಂದೆಡೆ ಮಧುರೆ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ನಡೆದ ಜೆಲ್ಲಿಕಟ್ಟಿನಲ್ಲಿ ಮೂವರು ಗಾಯಗೊಂಡಿದ್ದಾರೆ. 1,200 ಎತ್ತುಗಳು 800 ಹೋರಿಗಳನ್ನು ಮಣಿಸುವವರು ಈ ಜಲ್ಲಿಕಟ್ಟಿನಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ನಿಸಾನ್ ಮ್ಯಾಗ್ನೆಟ್ ಕಾರು ಮತ್ತು ಭಾಗವಹಿಸಿದ ಪ್ರತಿಯೊಂದು ಹೋರಿಗಳಿಗೂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಗಿತ್ತು. ಸುರಕ್ಷೆಯನ್ನು ಖಚಿತಗೊಳಿಸಲು ವೈದ್ಯಕೀಯ ತಂಡ, ಪಶು ವೈದ್ಯರ ತಂಡ, ರೆಡ್ಕ್ರಾಸ್ ಸ್ವಯಂಸೇವಕರು, ಅಂಬ್ಯುಲೆನ್ಸ್ ನ್ನು ನಿಯೋಜನೆಗೊಳಿಸಲಾಗಿತ್ತು.