ಮಂಗಳೂರು(ಪಡುಬಿದ್ರಿ): ಸೈಬರ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾನಾ ರೀತಿಯ ಕಸರತ್ತು ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪಡುಬಿದ್ರಿಯ ನಂದಿಕೂರಿನಲ್ಲಿ ಶಿಫ್ಟ್ ಇನ್’ಚಾರ್ಜ್ ಕೆಲಸ ಮಾಡಿಕೊಂಡಿರುವ ತಮಿಳುನಾಡು ಮೂಲದ ಟಿಯಾಗು ಎಂಬವರಿಗೆ ಬರೋಬ್ಬರಿ ಹದಿನೈದು ಲಕ್ಷ ರೂಪಾಯಿ ವಂಚಿಸಲಾಗಿದೆ.
ಫೆಡ್ಎಕ್ಸ್ ಕೊರಿಯರ್ ಎಂಬ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ಕರೆಯಲ್ಲಿ ಓರ್ವ ವ್ಯಕ್ತಿಯು ಇಂಗ್ಲೀಷ್ನಲ್ಲಿ ಮಾತನಾಡುತ್ತಾ “ನೀವು ಮುಂಬೈನಿಂದ ಇರಾನ್ಗೆ ಕೊರಿಯರ್ ಮಾಡಿದ ಕೊರಿಯರ್ ಡೆಲಿವರಿ ಆಗಲಿಲ್ಲ” ಎಂದು ಹೇಳಿದ್ದಾನೆ. ಇದಕ್ಕೆ ಟಿಯಾಗು, ನಾನು ಯಾವುದೇ ಕೊರಿಯರ್ ಆರ್ಡರ್ ಮಾಡಲಿಲ್ಲ ಕೊರಿಯರ್ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾನೆ. ಆಗ ಅಗಂತುಕ, ಡಿಪಾರ್ಟ್ ಮೆಂಟ್ : ಫೆಡೆಕ್ಸ್ ಮುಂಬೈ ಅಂದೇರಿ ಬ್ರ್ಯಾಂಚ್. ಪಾರ್ಸೆಲ್ ಸೆಂಟ್ ಡೇಟ್ 10/01/2024. ರಿಸೀವರ್ ನೇಮ್: ಝಂಗ್ ಲಿನ್. ಕಾಂಟೆಕ್ಟ್ ನಂಬರ್: 9862737889, ಪಾರ್ಸೆಲ್ ಟ್ರಾಕಿಂಗ್ ಐಡಿ: 22892321291, ಪಾರ್ಸೆಲ್ ಕಂಟೆಂಟ್ಸ್: ಎಕ್ಸ್ ಪಯರ್ಡ್ ಪಾಸ್ ಪೋರ್ಟ್-5, ಎಸ್ ಬಿ ಐ ಕ್ರೆಡಿಟ್ ಕಾರ್ಡ್ಸ್, 4 ಕ್ಲೋತ್ಸ್, 2ಕೆಜಿ ಟಾಯ್-1, ಎಂಡಿಎಂಎ 450 ಗ್ರಾಂ ಪಾರ್ಸೆಲ್ನಲ್ಲಿ ಇದೆ ಎಂದು ಹೇಳಿದ್ದಾನೆ. ಮಾತ್ರವಲ್ಲದೆ, ನಿಮ್ಮ ಐಡಿ ಮಿಸ್ಯೂಸ್ ಆಗಿದೆ. ಎಂಡಿಎಂಎ ಡ್ರಗ್ ಆಗಿದ್ದು ಅಕ್ರಮವಾಗಿ ಕಳುಹಿಸಲಾಗುತ್ತಿದೆ. ನೀವು ಸಿಕ್ಕಿಬಿದ್ದರೆ ನಿಮಗೆ ಜೀವನ ಪರ್ಯಂತ ಕೇಸು ದಾಖಲಾಗುತ್ತದೆ, ನೀವು ಸೈಬ್ರರ್ ಕಂಪ್ಲೇಟ್ ಕೊಡುವುದು ಉತ್ತಮ ಎಂದು ಮುಂಬೈ ಸೈಬರ್ ಕ್ರೈಂ ಬ್ರಾಂಚ್ ಗೆ ಕರೆಯನ್ನು ವರ್ಗಾವಣೆ ಮಾಡುವುದಾಗಿ ಹೇಳಿ ನಾಟಕ ಮಾಡಿದ್ದಾನೆ.
ಒಂದು ನಿಮಿಷದ ನಂತರ ಇನ್ನೊರ್ವ ವ್ಯಕ್ತಿ ಮಾತನಾಡಿ, ನಿಮ್ಮ ಅಕೌಂಟ್ ಚೆಕ್ ಮಾಡಬೇಕಿದೆ ಎಂದು ಹೇಳಿ ನಂಬಿಸಿ ಸಂತ್ರಸ್ಥರ ಐಸಿಐಸಿಐ ಅಪ್ಲಿಕೇಶನ್ನಲ್ಲಿರುವ ಪ್ರಿ ಅಪ್ರೂವುಡ್ ಲೋನ್ಗೆ ಹೋಗಿ ಪರ್ಸನಲ್ ಲೋನ್ ಗೆ ಕ್ಲಿಕ್ ಮಾಡಲು ಹೇಳಿದ್ದಾನೆ. ಪ್ರಿ ಅಪ್ರೂವುಡ್ ಪರ್ಸನಲ್ ಲೋನ್ ಗೆ ಕ್ಲಿಕ್ ಮಾಡಿದಾಗ ಸಿಗುವ ಲೋನ್ ಮೊತ್ತ 15,62,921/- ಎಂದು ಬಂದಿದೆ. ಅಪ್ಲೈ ಬಟನ್ ಕ್ಲಿಕ್ ಮಾಡಿದ ಟಿಯಾಗು ಇಂಟರ್ ನೆಟ್ ಲಾಗಿನ್ ಒಟಿಪಿ ಯನ್ನು ಫೋನ್ ನಲ್ಲಿದ್ದ ವ್ಯಕ್ತಿಗೆ ನೀಡಿದ್ದು, ಆಗ ಹಣವು ಬ್ಯಾಂಕ್ ಖಾತೆಗೆ ಜಮಾ ಆಗಿದೆ. ನಂತರ ಆ ವ್ಯಕ್ತಿಯು ಸೈಬರ್ ಕ್ರೈಮ್ ನವರು ಎಂದು ನಂಬಿಸಿ ಅಕೌಂಟ್ ನಂಬ್ರ ನೀಡಿ ಖಾತೆಗೆ ಟಿಯಾಗು ಅಕೌಂಟ್ನಲ್ಲಿದ್ದ 15,62,921/- ಮೊತ್ತವನ್ನು ಅಕೌಂಟ್ಗೆ ಆರ್.ಟಿ.ಜಿ.ಎಸ್.ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2024, ಕಲಂ: 419, 420 ಐಪಿಸಿ ಮತ್ತು ಕಲಂ: 66(ಸಿ), 66(ಡಿ) ಐಟಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.