ಮಂಗಳೂರು (ಅಯೋಧ್ಯೆ): ಅಯೋಧ್ಯೆಯ ರಾಮ ಮಂದಿರದ ಗರ್ಭ ಗುಡಿಯಲ್ಲಿ ಜ.18ರಂದು ಬಾಲರಾಮನ ವಿಗ್ರಹವನ್ನು ಇರಿಸಲಾಯಿತು. ಕಪ್ಪು ಕಲ್ಲಿನಲ್ಲಿ ನಿಂತಿರುವ ಭಂಗಿಯ ಐದು ವರ್ಷ ವಯಸ್ಸಿನ ರಾಮಲಲ್ಲಾ ವಿಗ್ರಹದ ಮೊದಲ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜ.22ರಂದು ಈ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಧಾರ್ಮಿಕ ವಿಧಿ ವಿಧಾನಗಳಿಗೆ ಪ್ರಧಾನಿ ಮೋದಿ ಅವರು ಮುಖ್ಯ ಯಜಮಾನರಾಗಿದ್ದಾರೆ.
51 ಇಂಚಿನ ಈ ವಿಗ್ರಹವನ್ನು ಕನ್ನಡಿಗ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ್ದಾರೆ. ಜ.18ರಂದು ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಯಿತು.