ಮಂಗಳೂರು/ಹಾಸನ: ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರದ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ನಡೆದಿದೆ.ಸಕಲೇಶಪುರದಲ್ಲಿ 112 ಪೊಲೀಸ್ ವಾಹನದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್ (39) ಆತ್ಮಹತ್ಯೆ ಮಾಡಿಕೊಂಡವರು.
ಸೋಮಶೇಖರ್ ವಿರುದ್ಧ ಪತ್ನಿ ಕಿರುಕುಳ ಆರೋಪ ಮಾಡಿ DySPಗೆ ದೂರು ನೀಡಿದ್ದರು. ಆತ್ಮತ್ಯೆಗೆ ಇದೇ ಕಾರಣವೆಂದು ಶಂಕೆ ವ್ಯಕ್ತವಾಗಿದ್ದು,ಈ ಕುರಿತು ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.