ನಂಜನಗೂಡುವಿನಲ್ಲಿ ನಡೆದ ಘಟನೆ-ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರುಪಾಲು

ಮಂಗಳೂರು(ಮೈಸೂರು): ಸ್ನಾನಕ್ಕೆಂದು ನದಿಗಿಳಿದಾಗ ನೀರುಪಾಲಾದ ದುರಂತ ಘಟನೆ ನಂಜನಗೂಡಿಗೆ ಹೆಜ್ಜಿಗೆ ಸೇತುವೆ ಬಳಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಶಬರಿಮಲೆಯ ಐವರು ಅಯ್ಯಪ್ಪ ಮಾಲಾಧಾರಿಗಳು ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಇರುವ ಕಪಿಲಾ ನದಿಯಲ್ಲಿ  ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಮೂವರು ನೀರು ಪಾಲಾಗಿದ್ದಾರೆ.

ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳು ಕೊಡಗು ಮೂಲದವರಾಗಿದ್ದಾರೆ.ನೀರುಪಾಲಾದ ಮೂವರಿಗಾಗಿ ಹುಡುಕಾಟ ನಡೆಯುತ್ತಿದ್ದು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಧಾವಿಸಿದ್ದಾರೆ.

LEAVE A REPLY

Please enter your comment!
Please enter your name here