ಮಂಗಳೂರು (ಅಮೆರಿಕ): ಕಾರ್ಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿರುವ ಘಟನೆ ಅಮೆರಿಕಾದ ಮಿಯಾಮಿಯಲ್ಲಿ ನಡೆದಿದೆ.
ಕಾರ್ಗೊ ವಿಮಾನದ ಎಂಜಿನ್ ದೋಷದ ಕಾರಣಕ್ಕೆ ಬೆಂಕಿ ಹೊತ್ತಿ ವಿಮಾನದ ಬಾಹ್ಯ ಭಾಗ ಉರಿದಿದೆ ಎನ್ನಲಾಗಿದ್ದು, ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಸಂದರ್ಭದ ಕಾರ್ಯವಿಧಾನಗಳನ್ನು ಅನುರಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೈಲಟ್ ವಿಮಾನವನ್ನು ತುರ್ತು ಭೂಸ್ಫರ್ಶ ಮಾಡುವಂತೆ ಹೇಳುತ್ತಿರುವ ಆಡಿಯೋ ವೀಡಿಯೋದಲ್ಲಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
The Boeing 747 cargo plane whose engine caught on fire in Miami last night was pretty new, with the flight certificate issued by the FAA in November 2015. A softball sized hole was found above engine number 2. Flight 5Y95 landed safely back at Miami 14 mins after takeoff. pic.twitter.com/lgAnwavTej
— Ryan Petersen (@typesfast) January 19, 2024