ಮಂಗಳೂರು : ಬೆಳ್ತಂಗಡಿ ತಾಲೂಕಿನ ವೇಣೂರು ಸನಿಹದ ನಿಟ್ಟಡೆ ಗ್ರಾಮದ ಬರ್ಕಜೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರವು ರಾಜ್ಯದಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದೆ.
ಫೆ.1ರಿಂದ 5ರ ವರೆಗೆ ಜರಗಲಿರುವ ಬರ್ಕಜೆ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದಲ್ಲಿ ಫೆ.4ರಂದು ರಾತ್ರಿ ಕ್ಷೇತ್ರದ ಪರಿವಾರ ದೈವಗಳ ಗಗ್ಗರ ಸೇವೆಯ ಜೊತೆ 18 ಗುಳಿಗಗಳಿಗೂ ನರ್ತನ ಸೇವೆ ಜರಗಲಿದೆ ಎಂದು ಕ್ಷೇತ್ರ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶೇಷವಾಗಿ ಇಲ್ಲಿ ಏಕಕಾಲದಲ್ಲಿ 9 ನವಗುಳಿಗಗಳ ನರ್ತನ ಸೇವೆ ಜರಗುತ್ತಿದ್ದು, ಊರಿನ ಹಾಗೂ ದೂರಾದೂರಿನ ಭಕ್ತರು ಆಗಮಿಸಿ ದೈವಗಳ ನರ್ತನ ಸೇವೆಯನ್ನು ಕಂಡು ಪುನೀತಾರಾಗುತ್ತಿದರು. ಅದರಲ್ಲೂ ಈ ಬಾರಿ 18 ಗುಳಿಗಗಳು ಏಕಕಾಲದಲ್ಲಿ ಅಬ್ಬರಿಸಲಿದ್ದು, ಭಕ್ತ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ.