ಮಂಗಳೂರು(ಅಯೋಧ್ಯೆ) : ಜ.22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಡುಪಿಯ ಕೃಷ್ಣಮಠದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಗರ್ಭಗುಡಿಯಲ್ಲಿ ಮುಖ ಮುಚ್ಚಿಕೊಂಡಿರುವುದು ಎಲ್ಲೆಡೆ ಚರ್ಚೆಯಾಗುತ್ತಿದ್ದು, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯಾಕೆ ಹೀಗೆ ಮಾಡಿದರೆನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು.
ಪ್ರಧಾನಿ ಮೋದಿಯವರು ರಾಮಲಲ್ಲಾನಿಗೆ ಭಕ್ಷ್ಯ ಮತ್ತು ಫಲಗಳನ್ನು ನೈವೇದ್ಯ ಮಾಡುತ್ತಿದ್ದರು. ಈ ಸಂದರ್ಭ ಅಲ್ಲಿದ್ದ ಪೇಜಾವರ ಶ್ರೀಗಳು ತಮ್ಮ ಅಂಗವಸ್ತ್ರದಿಂದ ಮುಖ ಮುಚ್ಚಿಕೊಂಡಿದ್ದರು. ಮುಖ ಮುಚ್ಚಿಕೊಂಡ ವಿಚಾರಕ್ಕೆ ಸ್ಪಷ್ಟನೆ ದೊರತಿದ್ದು, ದೇವರಿಗೆ ನೈವೇದ್ಯ ಮಾಡುವ ಸಂದರ್ಭ ದೇವರನ್ನು ನೋಡಬಾರದು ಎಂಬ ಶಾಸ್ತ್ರೀಯ ನಿಯಮ ಇದೆ. ನಮಗೆ ಇದನ್ನು ಹಿರಿಯ ಗುರುಗಳು ಹೇಳಿಕೊಟ್ಟಿದ್ದಾರೆ. ಅದಕ್ಕಾಗಿ ನಾನು ನನ್ನ ಮುಖವನ್ನು ವಸ್ತ್ರದಿಂದ ಮುಚ್ಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.