ಮಂಗಳೂರು(ಅಬುಧಾಬಿ): ಅಬುಧಾಬಿಯಲ್ಲಿ ನಿರ್ಮಾಣವಾದ ಹಿಂದೂ ದೇವಾಲಯವನ್ನು ಫೆ.14 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸ್ವಾಮಿನಾರಾಯಣ ಸಂಸ್ಥೆಯ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈ ದೇವಾಲಯವನ್ನು ಸ್ವಾಮಿನಾರಾಯಣ ಸಂಸ್ಥೆ ನಿರ್ಮಿಸಿದ್ದು, ಯುಎಇಯ ಮೊದಲ ಸಾಂಪ್ರದಾಯಿಕ ಕಲ್ಲಿನ ಹಿಂದೂ ದೇವಾಲಯವಾಗಿದೆ. ಅಬು ಮುರೇಖಾ ಜಿಲ್ಲೆಯಲ್ಲಿ 27 ಎಕರೆ ಜಾಗದಲ್ಲಿ ಈ ದೇವಾಲಯ ತಲೆ ಎತ್ತಿದೆ. ಉದ್ಘಾಟನೆ ಹಿನ್ನೆಲೆ ಬಿಎಪಿಎಸ್ನ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಸ್ವಾಮಿ ಮಹಾರಾಜ್ ಅವರು ಯುಎಇಗೆ ಆಗಮಿಸಿದ್ದಾರೆ. ಈ ಮಂದಿರದ ಉದ್ಘಾಟನೆಯನ್ನು ‘ಸೌಹಾರ್ದತೆಯ ಹಬ್ಬ’ದಂತೆ ಆಚರಿಸಲಾಗುತ್ತದೆ. ನಂಬಿಕೆಯನ್ನು ಬಲಪಡಿಸುವುದು, ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಉದ್ಘಾಟನಾ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಸ್ವಾಮಿನಾರಾಯಣ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಭಾರತ ಮತ್ತು ಯುಎಇ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಧಾನಮಂತ್ರಿಯಾಗಿ ಯುಎಇಗೆ ಇದು ಮೋದಿಯ ಏಳನೇ ಭೇಟಿಯಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Catch @palkisu's exclusive ground report from the BAPS temple in Abu Dhabi. The world is eager for the inauguration of UAE's first Hindu temple, scheduled for February 14. pic.twitter.com/cZqVYBrTry
— Firstpost (@firstpost) February 3, 2024