ಮಂಗಳೂರು(ವಿಟ್ಲ): ಅಡ್ಯನಡ್ಕ ಹೃದಯ ಭಾಗದಲ್ಲಿರುವ ಕರ್ಣಾಟಕ ಬ್ಯಾಂಕ್‌ಗೆ ದರೋಡೆಕೋರರು ನುಗ್ಗಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಫೆ.7 ರ ರಾತ್ರಿ ಈ ಘಟನೆ ನಡೆದಿದ್ದು ಬ್ಯಾಂಕಿನ ಹಿಂದಿನ ಕಿಟಕಿಯ ಕಬ್ಬಿಣದ ರಾಡ್ ಮುರಿದು ಒಳ ನುಗ್ಗಿ ಗ್ಯಾಸ್ ಕಟ್ಟರ್ ಮೂಲಕ ಲಾಕರನ್ನು ತುಂಡರಿಸಿ ಕಳ್ಳತನ ನಡೆಸಿದ್ದಾರೆ.
ಇಂದು(ಫೆ.8)ಮುಂಜಾನೆ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ತೆರೆದು ಓಳ ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ನಿರೀಕ್ಷಕ ನಾಗರಾಜ್ ಹೆಚ್.ಇ ಮತ್ತು ತಂಡ ಪರಿಶೀಲನೆ ನಡೆಸಿ, ಹೆಚ್ಚಿನ ತನಿಖೆಗಾಗಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ ಬಿ ಸ್ಥಳಕ್ಕಾಗಮಿಸಿದ್ದಾರೆ. ಹಳೆಯ ಕಟ್ಟಡದಲ್ಲಿ ಬ್ಯಾಂಕ್ ಇದ್ದು, ಸುತ್ತಲೂ ಕಾಡು ಪೊದೆಗಳಿಂದ ಆವರಿಸಿಕೊಂಡಿದೆ. ಮುಂಜಾಗ್ರತ ಕ್ರಮವಿಲ್ಲದಿರುವುದೇ ಕಳ್ಳತನಕ್ಕೆ ಕಾರಣ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಎಷ್ಟು ಮೌಲ್ಯದ ಚಿನ್ನ ಹಾಗೂ ಹಣ ಕದ್ದೊಯ್ಯಲಾಗಿದೆ ಎಂಬುವುದು ಇನ್ನಷ್ಟೆ ತಿಳಿದು ಬರಬೇಕಾಗಿದೆ.