



ಮಂಗಳೂರು(ಕೊಡಗು): ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಸಹಿತ ನಗದು ಕಳ್ಳತನ ನಡೆಸಿದ ಘಟನೆ ಕೊಡಗಿನ ಸಂಪಾಜೆ ಬೈಲಿನಲ್ಲಿ ಫೆ.08 ರಂದು ನಡೆದಿದೆ.







ಸಂಪಾಜೆ ಬೈಲಿನ ಕನ್ಯಾನ ವಿಜಯ ಅವರು ಬೆಳಿಗ್ಗೆ ಎಂದಿನಂತೆ ಕಲ್ಲುಗುಂಡಿಯ ತಮ್ಮ ಅಂಗಡಿಗೆ ಹೋಗಿ ಸಂಜೆ ವೇಳೆ ಮನೆಗೆ ಹಿಂದಿರುಗಿ ಬಂದು ನೋಡಿದಾಗ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿತ್ತು. ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. 40 ಗ್ರಾಂ ಚಿನ್ನಾಭರಣ, 20,000 ನಗದು ಮತ್ತು ಉಂಗುರ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಮಡಿಕೇರಿ ಪೊಲೀಸ್ ಸಿಬ್ಬಂದಿ, ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ತನಿಖೆ ಕಯಗೊಂಡಿದ್ದಾರೆ.















