ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ ನಿಧನ

ಮಂಗಳೂರು(ನವದೆಹಲಿ): ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ ಅವರು ಭಾನುವಾರ ಮುಂಜಾನೆ ಛತ್ತೀಸಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ನಿಧನರಾದರು.

ವಿದ್ಯಾಸಾಗರ ಮಹಾರಾಜರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. 3 ದಿನಗಳ ಹಿಂದೆ ಸಮಾಧಿ ಪ್ರಕ್ರಿಯೆ ಅಂದರೆ ‘ಸಲ್ಲೇಖನ’ವನ್ನು ಪ್ರಾರಂಭಿಸಿದ್ದರು. ಇದರ ಅಡಿಯಲ್ಲಿ, ಅವರು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಇದಾದ ಬಳಿಕ ಶನಿವಾರ ರಾತ್ರಿ 2:35ರ ಸುಮಾರಿಗೆ ಆಚಾರ್ಯ ದೇಹ ತೊರೆದಿದ್ದಾರೆ. ಜೈನ ಧರ್ಮದ ಪ್ರಕಾರ ಸಲ್ಲೇಖನ ಎಂದರೆ ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ತೆಗೆದುಕೊಳ್ಳುವ ಪ್ರತಿಜ್ಞೆಯಾಗಿದೆ. ಸಾವಿನ ತನಕ ಸ್ವಯಂಪ್ರೇರಿತ ಉಪವಾಸವನ್ನು ಇದು ಒಳಗೊಂಡಿರುತ್ತದೆ ಎಂದು ಜೈನ ತೀರ್ಥರರೊಬ್ಬರು ಹೇಳಿದ್ದಾರೆ. ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಾನುವಾರ ಮಧ್ಯಾಹ್ನ 1 ಗಂಟೆಗೆ ಮೆರವಣಿಗೆ ನಡೆಸಲಾಗುವುದು, ಬಳಿಕ ಚಂದ್ರಗಿರಿ ತೀರ್ಥದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಆಶ್ರಮದ ಹೇಳಿಕೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here