ಮಂಗಳೂರು(ಉಳ್ಳಾಲ): ನಾಪತ್ತೆಯಾಗಿದ್ದ ಉಳ್ಳಾಲ ತಾಲೂಕಿನ ಸೋಮೇಶ್ವರ ಮೂಡ ಬಡಾವಣೆ ನಿವಾಸಿ ಗೌತಮ್ ಎಮ್(30) ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಫೈನಾನ್ಸ್ ಸೀಸರ್ ಆಗಿದ್ದ ಗೌತಮ್ ಕಳೆದ ಸೋಮವಾರ ಸಂಜೆ ತೊಕ್ಕೊಟ್ಟಿನಲ್ಲಿ ನಡೆದಿದ್ದ ಬಬ್ಬುಸ್ವಾಮಿ ದೈವದ ಪುನರ್ ಪ್ರತಿಷ್ಟೆ, ಕಲಶಾಭಿಶೇಕದ ಹೊರೆಕಾಣಿಕೆಯಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದರು. ಮನೆಯಿಂದ ರಾತ್ರಿ ಹೊರಹೋಗಿದ್ದ ಗೌತಮ್ ಮತ್ತೆ ವಾಪಸಾಗದ ಹಿನ್ನೆಲೆಯಲ್ಲಿ ಮರುದಿನ ಮನೆ ಮಂದಿ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬುಧವಾರ ಸಂಜೆ ವೇಳೆ ನೇತ್ರಾವತಿ ನದಿಯಲ್ಲಿ ಗೌತಮ್ ಶವ ಪತ್ತೆಯಾಗಿದೆ. ಮನೆ ಮಂದಿ ಮೃತದೇಹವನ್ನು ಗುರುತಿಸಿದ್ದು ಅವರ ಸಮಕ್ಷಮದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತ ಗೌತಮ್ ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.