ಮಂಗಳೂರು(ಬ್ರಸೀಲಿಯಾ): ಅಮಝಾನ್ ಮಳೆಕಾಡಿನಲ್ಲಿ ವಿಶ್ವದ ಅತೀ ದೊಡ್ಡ ಅನಕೊಂಡ(ಹಾವು) ಪತ್ತೆಯಾಗಿರುವುದಾಗಿ ವರದಿಯಾಗಿದೆ.
ʼನ್ಯಾಷನಲ್ ಜಿಯಾಗ್ರಾಫಿಕ್’ ಕಾರ್ಯಕ್ರಮಕ್ಕೆ ಕಾಡುಪ್ರಾಣಿಗಳ ಬಗ್ಗೆ ವರದಿ ಒದಗಿಸುವ ಪ್ರೊಫೆಸರ್ ಫ್ರೀಕ್ ವಾಂಕ್ ಅಮೆಝಾನ್ ಅರಣ್ಯ ಪ್ರದೇಶದ ಅತ್ಯಂತ ದುರ್ಗಮ ಪ್ರದೇಶದಲ್ಲಿ 26 ಅಡಿ ಉದ್ದದ ಹೆಬ್ಬಾವನ್ನು ಪತ್ತೆ ಮಾಡಿದ್ದಾರೆ. ಇದು 440 ಪೌಂಡ್(ಸುಮಾರು 200 ಕಿ.ಗ್ರಾಂ) ತೂಕ, ಕಾರಿನ ಟಯರಿನಷ್ಟು ದಪ್ಪವಿದೆ. ಇದರ ತಲೆ ಮಾನವನ ತಲೆಯ ಗಾತ್ರದಲ್ಲಿದೆ ಎಂದವರು ವರದಿ ಮಾಡಿದ್ದಾರೆ. ಈ ತಳಿಯ ಹಾವುಗಳು ವಿಶ್ವದ ಅತೀ ದೊಡ್ಡ ಮತ್ತು ಭಾರದ ಹಾವುಗಳಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ʼನ್ಯಾಷನಲ್ ಜಿಯಾಗ್ರಾಫಿಕ್’ನ `ಪೋಲ್ ಟು ಪೋಲ್’ ಸರಣಿ ಕಾರ್ಯಕ್ರಮಕ್ಕಾಗಿ ಅರಣ್ಯ ಪ್ರದೇಶದ ಚಿತ್ರೀಕರಣ ನಡೆಸುತ್ತಿರುವಾಗ ಇದು ಪತ್ತೆಯಾಗಿದೆ. ಸಂಶೋಧಕರು ಈ ತಳಿಗೆ `ಯುನೆಕ್ಟೆಸ್ ಅಕಯಿಮ’ ಎಂಬ ಲ್ಯಾಟಿನ್ ಹೆಸರಿಟ್ಟಿದ್ದು `ಉತ್ತರದ ಹಸಿರು ಅನಕೊಂಡ’ ಎಂಬುದು ಇದರರ್ಥವಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
The world's largest snake has been discovered in the Amazon Rainforest: The Northern Green Anaconda measures 26 feet long and weighs 440 lbs – and its head is the same size as a human's. pic.twitter.com/XlaDk0qVYt
— Denn Dunham (@DennD68) February 21, 2024