ದುಬೈಯಲ್ಲಿ ರಸ್ತೆ ಅಪಘಾತ-ಕೋಟೆಕಾರು ಬೀರಿ ನಿವಾಸಿ ವಿಧಿಶಾ ಮೃತ್ಯು

ಮಂಗಳೂರು: ದುಬೈಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಕೋಟೆಕಾರು ಬೀರಿ ನಿವಾಸಿ ವಿದಿಶಾ ಎಂಬವರು ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕುಲಾಲ್ ಮತ್ತು ವಿಠಲ್ ಕುಲಾಲ್ ಅವರ ಪುತ್ರಿ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು.

ತದ ನಂತರ 2019ರಲ್ಲಿ ದುಬೈಗೆ ತೆರಳಿ ಕಳೆದ ಐದು ವರುಷಗಳಿಂದ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ದಿನಂಪ್ರತಿ ಕಂಪೆನಿಯ ಕ್ಯಾಬ್‍ನಲ್ಲಿ ಸಂಚರಿಸುತ್ತಿದ್ದ ವಿದಿಶಾ ಫೆ. 22ರ ಗುರುವಾರದಂದು ತನ್ನ ಕಾರಿನಲ್ಲೆ ಸಂಚರಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಅಪಘಾತದ ಸಂಭವಿಸಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿದಿಶಾ ದುಬೈಯಲ್ಲಿ ವಾಹನ ಚಾಲನಾ ಲೈಸೆನ್ಸ್ ಪಡೆದಿದ್ದರು. ಕುಟುಂಬಸ್ಥರು ವಿದಿಶಾಳ ಮದುವೆಯ ಸಿದ್ಧತೆ ನಡೆಸುತ್ತಿರುವಾಗಲೇ ಈ ದುರಂತ ಸಂಭವಿಸಿದೆ.

LEAVE A REPLY

Please enter your comment!
Please enter your name here