ಆನೆಯೊಂದಿಗೆ ಸ್ನೇಹಕ್ಕೆ ಮುಂದಾದ ಮಹಿಳೆ-ವಿರಸ ತೋರಿದ ಆನೆ ಮಾಡಿದ್ದಾದರೂ ಏನು?-ವಿಡಿಯೋ ವೈರಲ್

ಮಂಗಳೂರು: ಆನೆಯೊಂದು ಮಹಿಳೆ ಮೇಲೆ ದಾಳಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೈರಲ್ ವಿಡಿಯೋದಲ್ಲಿ ಆನೆಯೊಂದು ತನ್ನ ಪಾಡಿಗೆ ತಾನು ನಿಂತುಕೊಂಡಿದೆ. ಆದರೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದ ಮಹಿಳೆಗೆ ಆನೆ ಸೊಂಡಿಲಿನಿಂದ ತಳ್ಳಿಹಾಕಿದೆ. ಆನೆ ತಳ್ಳಿದ ರಭಸಕ್ಕೆ ಮಹಿಳೆ ಒಂದಿಷ್ಟು ದೂರ ಹೋಗಿ ಬಿದ್ದಿದ್ದಾಳೆ. ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ. ಆನೆ ತನ್ನ ಆಹಾರ ಸೇವಿಸುತ್ತಿರುವ ವೇಳೆ ಮಹಿಳೆ ಆನೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾಳೆ. ಖುಷಿಯಿಂದ ಆನೆ ಬಳಿಗೆ ಬಂದ ಮಹಿಳೆಯನ್ನು ಆನೆ ತನ್ನ ಸೊಂಡಿಲಿನಿಂದ ತಳ್ಳುತ್ತದೆ. ಈ ವೀಡಿಯೊವನ್ನು ಬಳಕೆದಾರರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದ್ದು, ಸಾಕಷ್ಟು ಕಾಮೆಂಟ್‌ಗಳು ಬಂದಿವೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here