ಮಂಗಳೂರು: ತುಳುನಾಡು ದೈವ ದೇವರುಗಳು ನೆಲೆ ಬೀಡು… ದೈವಗಳ ಮಣ್ಣಿನಲ್ಲಿ ಇದೀಗ ಮತ್ತೊಂದು ಪವಾಡ ಗೋಚರವಾಗಿದೆ.. ಬೆಂಕಿ ಬೆಳಕು, ಗೆಜ್ಜೆ ಸದ್ದಿನ ಜೊತೆಗೆ ಸಂಚರಿಸೋ ದೈವೀ ಶಕ್ತಿ.. ತುಳುನಾಡ ದೈವಾರಾಧನೆಯ ಮತ್ತೊಂದು ವಿಸ್ಮಯಕಾರಿ ಹೆಜ್ಜೆ. ಇದೇ ಮಂಗಳೂರಿನ ಯೆಯ್ಯಾಡಿಯ ಕೈಗಾರಿಕಾ ಪ್ರದೇಶದಲ್ಲಿ ನೆಲೆಯಾಗಿ ಕಾರಣಿಕ ಸೃಷ್ಟಿಸುತ್ತಿರುವ ನಾಗ, ರಕ್ತೇಶ್ವರಿ ಮತ್ತು ಪರಿವಾರ ದೈವ ಸಾನಿಧ್ಯ.
ಹಲವು ವರ್ಷಗಳ ಹಿಂದೆ ಯೆಯ್ಯಾಡಿಯಲ್ಲಿ ರಕ್ತೇಶ್ವರಿ ದೈವದ ಆರಾಧನೆ ನಡೆಯುತ್ತಿತ್ತು.. ಆದ್ರೆ ಕಾಲ ಕಳೆದಂತೆ ಸುಮಾರು ವರ್ಷಗಳಿಂದ ರಕ್ತೇಶ್ವರಿ ದೈವದ ಆರಾಧನೆ ನಿಂತು ಹೋಗಿತ್ತು.. ಎಲ್ಲಿಯವರೆಗೆ ಅಂದ್ರೆ ಗ್ರಾಮದಲ್ಲೊಂದು ದೈವಸ್ಥಾನವಿದೆ ಎಂಬ ಬಗ್ಗೆ ಗ್ರಾಮಸ್ಥರಿಗೆ ಗೊತ್ತೇ ಇರಲಿಲ್ಲ.. ಇಡೀ ಗ್ರಾಮದ ಜನರಿಗೆ ಹಲವು ಬಾರಿ ಗೆಜ್ಜೆ ಸದ್ದು ಕೇಳಿದ ಅನುಭವವಾಗಿದೆ, ಆದ್ರೆ ಇದು ರಕ್ತೇಶ್ವರಿ ದೈವ ಅನ್ನೋದು ಯಾರ ಗಮನಕ್ಕೂ ಬಂದಿರಲಿಲ್ಲ.. ಆ ಬಳಿಕ ಇಲ್ಲಿ ಪ್ರಶ್ನಾ ಚಿಂತನೆ ನಡೆಸಿದಾಗ ನಾಗಾರಾಧನೆಯ ಸುಳಿವು ಸಿಕ್ಕಿತ್ತು. ಹೀಗಾಗಿ ಯೆಯ್ಯಾಡಿಯ ಈ ಪೊದೆಗಳಿಂದ ಆವರಿಸಿದ್ದ ಜಾಗದಲ್ಲಿ ದೀಪ ಹಚ್ಚುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಯಿತು. ಸೂಚನೆಯಂತೆ ನಾಗನ ಹುತ್ತದ ಬಳಿ ಗ್ರಾಮಸ್ಧರು ಭಕ್ತಿಯಿಂದ ದೀಪ ಹಚ್ಚಿ ನಾಗದೇವರನ್ನು ಆರಾಧಿಸಲು ಆರಂಭಿಸಿದರು.
ಇಷ್ಟೆಲ್ಲ ಆದ್ರೂ ಕೂಡ ಮತ್ತೆ ಮತ್ತೆ ಪ್ರಖರ ಬೆಳಕು, ಗೆಜ್ಜೆ ಸದ್ದು ಭಕ್ತರ ಕಿವಿಗೆ ಬೀಳುತ್ತಲೆ ಇತ್ತು. ನಾಗದೇವರಿಗೆ ದೀಪ ಇಡುವ ಜಾಗದಲ್ಲಿ ಮರವೊಂದಿದ್ದು, ಈ ಮರದ ಬುಡದ ಬಳಿ ಗೆಜ್ಜೆ ಸದ್ದು ಕೊನೆಯಾಗುತ್ತಿತ್ತು.. ಈ ಎಲ್ಲಾ ಅಚ್ಚರಿಯನ್ನ ಕಂಡ ಊರಿನ ಜನತೆ ಮತ್ತೆ ಪ್ರಶ್ನಾ ಚಿಂತನೆಯ ಮೊರೆ ಹೋದ್ರು. ಈ ವೇಳೆ ಮತ್ತೊಂದು ಅಚ್ಚರಿ ಭಕ್ತರಿಗೆ ಗೋಚರವಾಗಿದೆ. ಅದೇ ರಕ್ತೇಶ್ವರಿ ದೈವ. ಇದೇ ಮರದ ಬುಡದಲ್ಲಿ ರಕ್ತೇಶ್ವರಿ ದೈವ ನೆಲೆ ನಿಂತಿರೋದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ. ಬೆಂಕಿಯ ಪ್ರಖರ ಬೆಳಕು ಹಾಗೂ ಗೆಜ್ಜೆ ನಾದ ಕೇಳಿಸುತ್ತಿದ್ದುದು ಇದೇ ರಕ್ತೇಶ್ವರಿ ದೈವದ ಸಂಚಾರದಿಂದ ಅನ್ನೋದು ಬೆಳಕಿಗೆ ಬಂದಿದೆ. ಹೀಗಾಗಿ ಇಲ್ಲಿ ನೆಲೆಯಾಗಿರುವ ರಕ್ತೇಶ್ವರಿ ದೈವವನ್ನ ಗ್ರಾಮದ ಜನತೆ ನಂಬಿಕೊಂಡು ಬರುತ್ತಿದ್ದು ಪ್ರತಿನಿತ್ಯ ಇಲ್ಲಿ ದೀಪ ಇಟ್ಟು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ರಕ್ತೇಶ್ವರಿ ದೈವ ಭಕ್ತರ ಬಾಳಿನಲ್ಲಿ ಹಲವಾರು ಪವಾಡಗಳನ್ನ ಮೆರೆದಿದೆ. ರಕ್ತೇಶ್ವರಿ ಅಮ್ಮನಿಗೆ ದೀಪವಿಟ್ಟು ಕೈ ಮುಗಿಯುತ್ತಿದ್ದ ದೀಪು ಶೆಟ್ಟಿಗಾರ್ ಹಲವು ಅಚ್ಚರಿಯ ಘಟನೆಗಳನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ರಕ್ತೇಶ್ವರಿ ದೇವಿಯ ಕಾರಣಿಕದ ಬಗ್ಗೆ ದೀಪು ಶೆಟ್ಟಿಗಾರ್ ಅವರ ಮಾತುಗಳು ಇಲ್ಲಿದೆ