ನಟಿ ಮತ್ತು ಸಂಸದೆ ಜಯಪ್ರದಾ ನ್ಯಾಯಾಲಯಕ್ಕೆ ಹಾಜರು – ಜಾಮೀನು ರಹಿತ ವಾರಂಟ್ ರದ್ದು

ಮಂಗಳೂರು: ಬಿಜೆಪಿಯ ಮಾಜಿ ಸಂಸದೆ ಮತ್ತು ನಟಿ ಜಯಪ್ರದಾ ಅವರಿಗೆ ನ್ಯಾಯಾಲಯದಿಂದ ಬಿಗ್​ ರಿಲೀಫ್ ಸಿಕ್ಕಿದೆ. ಅವರ ವಿರುದ್ದ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ​ನ್ನು ನ್ಯಾಯಾಲಯ ಹಿಂಪಡೆದಿದೆ.

ಇಂದು ಶಾಸಕರು ಮತ್ತು ಸಂಸದರ ವಿಶೇಷ ಕೋರ್ಟ್​ಗೆ ತೆರಳಿ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರಾದ ಜಯಪ್ರದಾ, ಅವರ ವಿರುದ್ಧ ಜಾರಿಗೊಳಿಸಿದ ವಾರಂಟ್​ ಹಿಂಪಡೆಯುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯ 20,000 ರೂ.ಗಳ ದಂಡ ಮತ್ತು 4 ಜನರ ಶ್ಯೂರಿಟಿನೊಂದಿಗೆ ಅರ್ಜಿಯನ್ನು ಸ್ವೀಕರಿಸಿದೆ. ಅಲ್ಲದೇ ಪ್ರಕರಣದ ವಿಚಾರಣೆಗೆ ತಪ್ಪದೆ ಹಾಜರಾಗುವಂತೆ ಸೂಚಿಸಿ ಅವರ ವಿರುದ್ದ ಜಾರಿ ಮಾಡಿದ್ದ ಜಾಮೀನು ​ರಹಿತ ವಾರಂಟ್​ಗಳನ್ನು ಹಿಂಪಡೆದಿದೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಇರುವುದರಿಂದ ನ್ಯಾಯಾಲಯ ಅವರ ವಿರುದ್ಧ 7 ಬಾರಿ ನಾನ್​ ಬೇಲೇಬಲ್​​ ವಾರಂಟ್​ ಜಾರಿ ಮಾಡಿತ್ತು. ಅಲ್ಲದೇ ಕಳೆದ ವಾರ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದೂ ಘೋಷಿಸಿ ಮಾ.6 ರೊಳಗೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶ ಕೂಡಾ ಮಾಡಲಾಗಿತ್ತು.

LEAVE A REPLY

Please enter your comment!
Please enter your name here